Home Nagaraj Nayak Torke

Nagaraj Nayak Torke

                                      

ಕಲೆ, ಸಾಹಿತ್ಯದ ಪ್ರೋತ್ಸಾಹದೊಂದಿಗೆ ನೊಂದವರ ಬಾಳಲ್ಲಿ ಬೆಳಕಾದ ಟ್ರಸ್ಟ್ ‘ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ.)’

ಅಧ್ಯಕ್ಷರು, ಶ್ರೀ ನಾಗರಾಜ ನಾಯಕ ತೊರ್ಕೆ.

ಅರಣ್ಯಇಲಾಖೆಯಲ್ಲಿ ಡಿ.ಎಪ್.ಓ. ಆಗಿ ಸುಧೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಾಗರಾಜ ನಾಯಕ ಅವರು ತಮ್ಮ ನಿವೃತ್ತಿ ಜೀವನವನ್ನು ಸಮಾಜ ಸೇವೆಗಾಗಿ ಮೂಡಿಪಾಗಿಟ್ಟು ತಮ್ಮ ಸಮಾಜ ಸೇವೆಯ ಧ್ಯೇಯೋದ್ದೇಶದಿಂದ ಮೇ 16 / 2016 ರಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ಹುಟ್ಟು ಹಾಕಿದರು.ನೊಂದವರಿಗೆ,ಅಸಹಾಯಕರಿಗೆತಮ್ಮ ನೆರವಿನ ಹಸ್ತ ಚಾಚುವುದರ ಜೊತೆಗೆ ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ.

ಶಿಕ್ಷಣ ;-ನಾಗರಾಜ ನಾಯಕ ತೊರ್ಕೆ ಅವರು ಶಿಕ್ಷಣ ಪ್ರೇಮಿಗಳು.ಶಿಕ್ಷಣದಿಂದ ಮಾತ್ರ ಮನುಷ್ಯನ ಅಭಿವೃದ್ದಿ ಸಾಧ್ಯ ಎಂಬುದು ಅವರ ಅಭಿಪ್ರಾಯ .ಅವರು ಗ್ರಾಮೀಣ ಭಾಗದ ಹಾಗೂ ಅನೇಕ ಬಡ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಧನ ಸಹಾಯದೊಂದಿಗೆ ಇತರೇ ಸೌಲಭ್ಯಗಳನ್ನು ಒದಗಿಸಿ ಅವರ ಶೈಕ್ಷಣಿಕ ಬದುಕನ್ನು ಹಸನಾಗಿಸಿದ್ದಾರೆ.ವಿಶೇಷವಾಗಿ ದಿನೇಶ ಗೌಡ ಎಂಬ ವಿಕಲಚೇತನ ಬಡ ವಿಧ್ಯಾರ್ಥಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 93.46% ಅಂಕಗಳಿಸಿದ್ದ ಮುಂದೆ ಶಿಕ್ಷಣ ಮುಂದುವರಿಸಬೇಕೆಂಬ ಆತನ ಆಸೆ ಆಕಾಂಕ್ಷೆಗೆ ನೀರುಣಿಸಿದ ಶ್ರಿಯುತರು ಆತನನ್ನು ದತ್ತು ಪಡೆದು ಆತನ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವುದರೊಂದಿಗೆ ಪ್ರತಿ ದಿನ ಕಾಲೇಜಿಗೆ ಹೋಗಿ ಬರಲು ವಾಹನದ ವ್ಯವಸ್ಥೆಯನ್ನು ಕೂಡ ಮಾಡಿರುತ್ತಾರೆ.ಇವರು ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 90% ಹೆಚ್ಚು ಪ್ರತಿ ಶತ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅವರಿಗೆ ಪೂರಕವಾದ ವಾತಾವರಣ ನಿರ್ಮಿಸಿ ಅವರ ಏಳ್ಗೆಗೆ ಶ್ರಮಿಸಿದ ಶಾಲಾ ಶಿಕ್ಷಕರನ್ನು ಮತ್ತು ಶಾಲಾಭಿವೃಧ್ದಿ ಮಂಡಳಿಯವರನ್ನು ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಈಗಾಗಲೇ ಕುಮಟಾ ಹೊನ್ನಾವರ ಭಾಗದ ಬಹುತೇಕ ಎಲ್ಲಾ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿ ಶಿಕ್ಷಣ ಪ್ರಿಯರ, ಶಿಕ್ಷಣ ಪ್ರೋತ್ಸಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉಚಿತ ಕಂಪ್ಯೂಟರ್ ತರಬೇತಿ ಶಿಬಿರವನ್ನು ಹಮ್ಮಿಕೊಂಡು ವಿಧ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನವನ್ನು ಒದಗಿಸಿದ್ದಾರೆ. ಹೀರೆಗುತ್ತಿಯಲ್ಲಿ ಪಿ.ಯು.ಸಿ.ಯಲ್ಲಿ 90% ಪ್ರತಿಶತದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿ ಗೋಪಾಲ ನಾಗು ಹಳ್ಳೇರ ಈತನ ಮನೆಗೆ ನಾಗರಾಜ ನಾಯಕ ಅವರು ತೆರಳಿ ಆತನನ್ನು ಸನ್ಮಾನಿಸಿ ನೆರವು ನೀಡಿದರು ಮತ್ತು ಇನ್ನೂ ಮುಂದೆಯು ಸಹ ನೆರವು ನೀಡುವುದಾಗಿ ಭರವಸೆಇತ್ತು ಅಭಿನಂದಿಸಿದರು.ಕೆಲವು ಗ್ರಾಮಗಳ ಹಿಂದುಳಿದ ಸಮಾಜದ ಅರ್ಹ ವಿಧ್ಯಾರ್ಥಿಗಳಿಂದ ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಹಾಗೂ ರೈಲ್ವೇ ಇಲಾಖೆಗಳಲ್ಲಿ ಕೆಲಸದ ಅರ್ಜಿತುಂಬುವಲ್ಲಿ ಸಹಕರಿಸಿ ಅವರಿಗೆ ಜೀವನಾಧಾರ ಕಲ್ಪಿಸಲು ಯತ್ನಿಸಿದ್ದಾರೆ. ಹೀರೆಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳಿ ಮಂಜಗುಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಊಟದಪ್ಲೇಟ, ಲೋಟಗಳನ್ನು ವಿತರಿಸಿ ವಿಧ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಿಕೊಟ್ಟಿದ್ದಾರೆ.

ಕ್ರೀಡೆ;-ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ ನಾಗರಾಜ ನಾಯಕ ತೊರ್ಕೆ ಅವರು ಕ್ರೀಡೆಯನ್ನು ಉತ್ತೇಜಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ಕ್ರಿಕೆಟ್, ಕಬ್ಬಡ್ಡಿ, ವಾಲಿಬಾಲ್ ಮುಂತಾದ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವ ನೀಡುವ ಮೂಲಕ ಯವಕರಲ್ಲಿ ಕ್ರೀಡಾಮನೋಭಾವನೆ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.ಬಾಡಗ್ರಾಮದ ಶಾಲಾ ಮಟ್ಟದ ಕಬ್ಬಡ್ಡಿ ಆಟಗಾರರಿಗೆ ಸಮವಸ್ತ್ರಗಳನ್ನು ಪೂರೈಸಿ ಹುರಿದುಂಬಿಸಿರುತ್ತಾರೆ.

ಕಲೆ ;-ಯಕ್ಷಗಾನಕಲೆಯ ಪ್ರಿಯರಾಗಿದ್ದ ನಾಗರಾಜ ನಾಯಕತೊರ್ಕೆ ಅವರು ಸ್ವತಃ ತಾವೇ ಯಕ್ಷಗಾನ ಪಾತ್ರ ನಿರ್ವಹಿಸಿದ್ದಾರೆ. ಇಂತಹ ಗಂಡು ಮೆಟ್ಟಿನ ಕಲೆಗೆ ವಿಶೇಷ ಮಹತ್ವಕೊಟ್ಟು ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳಿಗೆ ಅವರು ಪ್ರಾಯೋಜಕತ್ವವನ್ನುನೀಡಿದ್ದಾರೆ.ಅಲ್ಲದೆ ಅವರು ಇತರೇ ಕಲೆಗಳಿಗೂ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು ಕಲಾವಿದರನ್ನು ಗೌರವಿಸಿ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಕಲಾವಿದರನ್ನು ಬೆಳೆಸುವತ್ತ ವಿಶೇಷ ಗಮನ ಹರಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಶ್ರೀಯುತರು ಈ ಭಾಗದಲ್ಲಿ ಸಂಭವಿಸಿದ ಅನೇಕ ಅವಘಡಗಳು ಪ್ರಕೃತಿ ವಿಕೋಪಗಳಿಂದ ಸಂತ್ರಸ್ತರಾದವರ ಮನೆಗಳಿಗೆ ತೆರಳಿ ಅವರಿಗೆ ಸಾಂತ್ವನ ಹೇಳಿ ಸಹಾಯಧನದ ಜೊತೆಗೆ ಇತರೇ ಅನೂಕೂಲತೆ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.ಬಡತನದಿಂದ ಕಂಗೆಟ್ಟವರಿಗೆ, ಅಸಹಾಯಕರಿಗೆ ನೆರವು ಒದಗಿಸುವುದರೊಂದಿಗೆ ನೆರವು ಕೇಳಿ ಬಂದ ಅನೇಕ ನಿರುದ್ಯೋಗಿಗಳಿಗೆ ತಮ್ಮ ಸುತ್ತಮುತ್ತಲಿನ ಖಾಸಗಿ ವಲಯಗಳಲ್ಲಿ ಉದ್ಯೋಗ ದೊರಕಿಸಿ ಕೊಟ್ಟುಜೀವನಾಧಾರ ಕಲ್ಪಿಸಿದ್ದಾರೆ.

ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ;- ಸಾಂಸ್ಕ್ರತಿಕ ಉತ್ಸವಗಳಿಂದ ಸಾಮರಸ್ಯ ಸಾಧ್ಯ ಎಂಬುದನ್ನು ಅರಿತ ನಾಗರಾಜ ನಾಯಕ ತೊರ್ಕೆ ಅವರು ಈ ಭಾಗಗಳಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನು, ಮನ,ಧನ ಸಹಕಾರದೊಂದಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಹೊನ್ನಾವರದ ಬಂದರಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದೋಣಿ ಸ್ಪರ್ಧೆಯಲ್ಲಿ ಅವರು ಭಾಗವಹಿಸಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದ್ದಾರೆ.ಹೊನ್ನಾವರದ ಪ್ರಭಾತ ಉತ್ಸವದಂತಹ ಸಾಂಸ್ಕ್ರತಿಕಕಾರ್ಯಕ್ರಮವನ್ನು ಉಧ್ಘಾಟಿಸಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹದಾಯಕರಾಗಿದ್ದಾರೆ.

ಸಾಮಾಜಿಕ ಕಳಕಳಿ ಕಾರ್ಯಕ್ರಮ ;-ಸಾಮಾಜಿಕ ಕಳಕಳಿ ಹೊಂದಿರುವ ನಾಗರಾಜ ನಾಯಕ ತೊರ್ಕೆಅವರು ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಅರೇಅಂಗಡಿ, ಬಾಡ, ಹಾಗೂ ಗೋಕರ್ಣ ಭಾಗಗಳಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಿದ್ದಾರೆ.

ನೆಲ, ಜಲ, ಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಅವರು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ನೆಲ ಜಲ ಹಾಗೂ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಅವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ಕರೆ ನೀಡಿದರು.
ಅಲ್ಲದೆ ದಲಿತ ವರ್ಗಗಳ ಜೀವನ ಸುಧಾರಣೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದು ದಲಿತ ಸಮಾಜದಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಾಯ ನೀಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವಂತೆ ದಲಿತರಲ್ಲಿ ಸ್ಪೂರ್ತಿತುಂಬುತ್ತಿದ್ದಾರೆ.ದಲಿತ ಸಂಘರ್ಷ ಸಮಿತಿ,ಇತರೇ ದಲಿತ ಸಂಘಟನೆಗಳಿಂದ ಕೈಗೊಂಡ ಹೋರಾಟ ಪ್ರತಿಭಟನೆಗಳಲ್ಲಿ ಭಾಗಿಯಾಗಿ ನಿಮ್ಮೊಂದಿಗೆ ತಾನಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು ದಲಿತರ ಧ್ವನಿಯಾಗಿದ್ದಾರೆ.

ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿರುವ ನಾಗರಾಜ ನಾಯಕ ತೊರ್ಕೆ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಅರಣ್ಯಾಧಿಕಾರಿಯಾಗಿ ಅರಣ್ಯದ ಮಹತ್ವವನ್ನುಅರಿತಿರುವ ಅವರು ಕುಮಟಾ ಹಾಗೂ ಹೊನ್ನಾವರದ ನಾನಾ ಕಡೆಗಳಲ್ಲಿ ವನಮಹೋತ್ಸವವನ್ನು ಆಚರಿಸಿ ಅರಣ್ಯ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಅಲ್ಲದೇ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಭಾರತೀಯ ಸಂಸ್ಕ್ರತಿ ಹಾಗೂ ಹಿಂದುತ್ವ ಪ್ರತಿಪಾದನೆ ;-ಶ್ರೀಯುತ ನಾಗರಾಜ ನಾಯಕ ಅವರು ಸಾಮಾಜಿಕ ಕಳಕಳಿ ಹೊಂದಿರುವುದು ಮಾತ್ರವಲ್ಲದೆ ಭಾರತೀಯ ಸಂಸ್ಕ್ರತಿ ಮೌಲ್ಯವನ್ನು ಗೌರವಿಸುವ ಧಾರ್ಮಿಕ ಮನೋವೃತ್ತಿಯವರಾಗಿದ್ದು ರಾಮನವಮಿಯ ಸಂದರ್ಭದಲ್ಲಿ ಕೊಲ್ಲೂರಿನಿಂದ ಆಗಮಿಸಿದ ರಾಮರಥವನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಹಿಂದುತ್ವ ಪ್ರತಿಪಾದಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಚಂದಾವರ ಮುಂತಾದ ಕಡೆಗಳಲ್ಲಿ ನಡೆದ ರಾಮನವಮಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದರು.ಅಲ್ಲದೆ‘ವನವಾಸಿ ಕಲ್ಯಾಣ ಕರ್ನಾಟಕ’ಇವರಿಗೆ ಅವರ ಬೇಡಿಕೆ ಹಾಗೂ ಅವಶ್ಯಕತೆಗನುಗುಣವಾಗಿ ಕಬ್ಬಿಣದ ಕಪಾಟನ್ನುದೇಣಿಗೆಯಾಗಿ ನೀಡಿರುತ್ತಾರೆ. ಮತ್ತು ಕುಮಟಾದ ಆರ್.ಎಸ್.ಎಸ್.ನ ಒಕ್ಕೂಟದಿಂದ ನಡೆಸುತ್ತಿರುವ ಬ್ಲಡ್ ಬ್ಯಾಂಕ್‍ಗೆ ಹೆಚ್ಚಿನ ಧನ ಸಹಾಯ ನೀಡಿ ಜನರಿಗೆ ಅನೂಕೂಲತೆ ಒದಗಿಸಿದ್ದಾರೆ.ಅಲ್ಲದೆಕುಮಟಾದಲ್ಲಿ ನಡೆಯುತ್ತಿರುವ ಯುಗಾದಿ ಉತ್ಸವಕ್ಕೆ ಕಳೆದ 2ವರ್ಷಗಳಿಂದ ತನು, ಮನ,ಧನ ಸಹಾಯ ಮಾಡುತ್ತಾ ಬಂದಿರುತ್ತಾರೆ.ಮೊರಬಾ,ಎಣ್ಣೆಮಡಿ, ಹೀರೆಗುತ್ತಿ, ಮೂಲೆಕೇರಿ ಮುಂತಾದ ಕಡೆಗಳಲ್ಲಿ ನಡೆದ ಹಿಂದೂ ಧರ್ಮದ ವಿಶೇಷ ಆಚರಣೆಯಾದ ಸುಗ್ಗಿ ಹಬ್ಬದಲ್ಲಿ ಜನರೊಂದಿಗೆ ಬೆರೆತು ತಾನು ಕೂಡ ನಿಮ್ಮಲ್ಲಿ ಒಬ್ಬ ಎಂದು ಖುಷಿ ಹಂಚಿಕೊಂಡಿದ್ದು ಗಮನರ್ಹವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿ ಬಿ.ಜೆ.ಪಿ ಗೆ ಸೆರ್ಪಡೆ;-ಪ್ರಧಾನಿ ನರೇಂದ್ರ ಮೋದಿ ಅವರ ತತ್ವಾದರ್ಶಗಳಿಂದ ಪ್ರಭಾವಿತರಾದ ನಾಗರಾಜತೊರ್ಕೆ ಅವರು ಜುಲ್ಯೆ 11 / 2016 ರಂದು ತಮ್ಮ ಅಪಾರ ಅಭಿಮಾನಿ ಬಳಗದವರೊಂದಿಗೆ ಬಿ.ಜೆ.ಪಿ ಪಕ್ಷಕ್ಕೆ ಸೆರ್ಪಡೆಗೊಂಡರು. ಅವರುನಿಷ್ಠಾವಂತ ಮುಖಂಡರಾಗಿ ಪಕ್ಷದ ಸರ್ವೊತೊಮುಖ ಅಭಿವೃಧ್ಧಿಗೆ ಶ್ರಮಿಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ಕುಮಟಾದಲ್ಲಿ ನಡೆದ ತಿರಂಗಾಯಾತ್ರೆ, ಪಂಜಿನ ಮೆರವಣಿಗೆ ಹಾಗೂಇತರೇ ಎಲ್ಲಾ ಹೋರಾಟಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಿದ್ದಾರೆ.ಸಂಸದ ಅನಂತಕುಮಾರ ಹೆಗಡೆ ಅವರ ನೇತ್ರತ್ವದಲ್ಲಿ ಗೋಕರ್ಣ, ಬಂಕಿಕೊಡ್ಲ, ಕೋಡ್ಕಣಿ, ಹನೇಹಳ್ಳಿ ಹಾಗೂ ಕುಮಟಾ ಮುಂತಾದ ಕಡೆಗಳಲ್ಲಿ ಬೃಹತ್ ಸಂಖ್ಯೆಯ ಸದಸ್ಯರನ್ನು ಬಿ.ಜೆ.ಪಿ.ಗೆ ಬರಮಾಡಿಕೊಂಡು ಪಕ್ಷದ ಸಂಘಟನೆಯಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿದ್ದು ಕೇಂದ್ರ ಸರ್ಕಾರದ ಹಲವು ಯೋಜನೆಗಳಾದ ಸ್ವಚ್ಛತಾಕಾರ್ಯಕ್ರಮ, ಯೋಗ, ಬೇಟಿ ಬಛಾವೊ ಬೇಟಿ ಪಡಾವೊ, ಮುಂತಾದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಅವುಗಳನ್ನು ಅನುಷ್ಟಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಬಿ.ಜೆ.ಪಿ.ಕುಮಟಾ ಮಂಡಳದ ವ್ಯಾಪ್ತಿಯಲ್ಲಿನ 6ಶಕ್ತಿ ಕೇಂದ್ರಗಳಲ್ಲಿ ದಿ/ಪಂ/ದೀನದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಿ ಸಮರ್ಪಣಾ ನಿಧಿ ಸಂಗ್ರಹಿಸಿ ಅರ್ಪಿಸಿದ್ದಾರೆ.
ಹೀಗೆ ಸಮಾಜದ ಎಲ್ಲಾ ವರ್ಗಗಳ ಎಲ್ಲಾ ಸಮುದಾಯದವರ ಅಭಿವೃದ್ದಿಗಾಗಿ ನಾಗರಾಜ ನಾಯಕತೊರ್ಕೆ ಅವರು ಶ್ರಮಿಸುತ್ತಿದ್ದಾರೆ.ಸಮಾಜದಿಂದ ಎಲ್ಲವನ್ನು ಪಡೆದುಕೊಂಡಿದ್ದು ತಿರುಗಿ ಸಮಾಜಕ್ಕೆಏನನ್ನಾದರು ನೀಡಬೇಕೆಂಬ ಹಂಬಲ ಇವರದ್ದು. ಹಾಗಾಗಿ ತಮ್ಮಕೈಲಾದಷ್ಟು ನಿಸ್ವಾರ್ಥ ಸೇವೆ ಒದಗಿಸುತ್ತಿದ್ದಾರೆ.

ಮನೆ ಮನೆಗೆ ಉಜ್ವಲ ಯೋಜನೆ ;- ಪ್ರಧಾನಿ ನರೇಂದ್ರ ಮೋದಿಯವರು ಬಡವರ ಮನೆಗೂ ಗ್ಯಾಸ್ ಸಂಪರ್ಕ ನೀಡುವ ಕುರಿತು ಹೊರತಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ನೇರವಾಗಿ ಮನೆ ಮನೆಗೆ ತಲುಪಿಸುವಲ್ಲಿ ಇವರ ಕಾರ್ಯ ಶ್ಲಾಘನೀಯ. ಉಚಿತವಾಗಿಯೇ ಗ್ಯಾಸ್ ಕಿಟ್ ಹಾಗೂ ಅದರ ಜೊತೆಗೆ ತಾವು ನೀಡುವ ಲೈಟರ್ ಹಾಗೂ ಇನ್ನಿತರ ಸಲಕರಣೆಗಳನ್ನು ಬಡವರ ಮನೆ ಮನೆಗೆ ತಲುಪಿಸುತ್ತಿದ್ದಾರೆ. ಜನತೆಯ ಜೊತೆಗಿದ್ದು ಅವರ ಕಷ್ಟ ಆಲಿಸಿ ಅವರಿಗೆ ಯೋಜನೆಯನ್ನು ತಲುಪಿಸುವಲ್ಲಿ ಬೆಳಕು ಸಂಸ್ಥೆ ಮತ್ತು ನಾಗರಾಜ ನಾಯಕ ತೊರ್ಕೆಯವರ ಕಾರ್ಯ ಜನತೆಯಿಂದ ಅಪಾರ ಮೆಚ್ಚುಗೆ ಪಡೆದಿದೆ.