Home Local ಜ.2೦ ರೊಳಗೆ ಜಿಲ್ಲೆಯಲ್ಲಿ ಜೆಡಿಎಸ್ ಬೂತ್ ಸಮಿತಿ ರಚನೆಯಾಗಲಿದೆ : ಬಿ.ಆರ್.ನಾಯ್ಕ

ಜ.2೦ ರೊಳಗೆ ಜಿಲ್ಲೆಯಲ್ಲಿ ಜೆಡಿಎಸ್ ಬೂತ್ ಸಮಿತಿ ರಚನೆಯಾಗಲಿದೆ : ಬಿ.ಆರ್.ನಾಯ್ಕ

SHARE

ಶಿರಸಿ : ಜೆಡಿಎಸ್ ಬೂತ್ ಸಮಿತಿಗಳ ರಚನೆ ಶೆ.೮೦ ರಷ್ಟು ಪೂರ್ಣಗೊಂಡಿದ್ದು, ಉಳಿದ ಶೆ.೨೦ ರಷ್ಟನ್ನು ಜ.15 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ತಿಳಿಸಿದರು.

ಇಲ್ಲಿನ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಿತಿ ರಚನೆ ಪ್ರಕ್ರಿಯೆ ಗಮನಿಸಲು ಪ್ರತಿ ತಾಲೂಕಿಗೆ ಜಿಲ್ಲಾ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಆಯಾ ತಾಲೂಕಾ ಅಧ್ಯಕ್ಷರಿಗೂ ಬೂತ್ ಸಮಿತಿ ರಚನೆ ಶೀಘ್ರ ಮುಗಿಸಲು ಸೂಚನೆ ನೀಡಲಾಗಿದೆ ಎಂದರು.

ಮನೆ ಮನೆಗೆ ಕುಮಾರಣ್ಣ ಎನ್ನುವ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಜ.1 ರಿಂದ ಪ್ರಾರಂಭಿಸಿ 15 ರೊಳಗೆ ಮುಗಿಸುವ ಗುರಿಯನ್ನು ಹೊಂದಿದ್ದೇವೆ. ಇಲ್ಲಿ ಕುಮಾರಣ್ಣನವರ ಗುರಿ, ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಲಾಗುವುದು. ಅಲ್ಲದೇ ಸರ್ಕಾರದ ಗಮನ ಸೆಳೆಯಲು ಪ್ರತಿ ಕ್ಷೇತ್ರದಲ್ಲಿಯೂ 5೦ ಕಿಮಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಾವು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದೇ ನಾವು ಅಧಿಕಾರಕ್ಕೆ ಬಂದರೆ ಮಾಡುವ ಅಭಿವೃದ್ಧಿ ಕೆಲಸಗಳ ಕುರಿತು ಜನರಿಗೆ ಮಾಹಿತಿ ನೀಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಈ ವೇಳೆ ಪ್ರಮುಖರಾದ ಶಶಿಭೂಷಣ ಹೆಗಡೆ, ಇಸ್ಮಾಯಿಲ್ ಜುಕಾಕೋ, ಆರ್.ಜಿ.ನಾಯ್ಕ ಮುಂತಾದವರು ಇದ್ದರು.