Home Local ಮಾದನಗೇರಿಯಲ್ಲಿ ಜರುಗಿದ ಅಯ್ಯಪ್ಪ ಭಕ್ತಮಂಡಳಿಯ ಅನ್ನಸಂತರ್ಪಣೆ ಕಾರ್ಯಕ್ರಮ

ಮಾದನಗೇರಿಯಲ್ಲಿ ಜರುಗಿದ ಅಯ್ಯಪ್ಪ ಭಕ್ತಮಂಡಳಿಯ ಅನ್ನಸಂತರ್ಪಣೆ ಕಾರ್ಯಕ್ರಮ

SHARE

ಕುಮಟಾ : ತಾಲೂಕಿನ ಮಾದನಗೇರಿಯಲ್ಲಿ ಅಯ್ಯಪ್ಪ ಭಕ್ತಮಂಡಳಿಯ ರಮೇಶ ಗುರುಸ್ವಾಮಿಯವರ ನೇತ್ರತ್ವದಲ್ಲಿ ಗುರುವಂದನಾ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಚಿನ್ಮಯ ಮಿಷನ್ ನ ಮುಖ್ಯಸ್ಥರಾದ ಶ್ರೀ ಕೃತಾತ್ಮಾನಂದ ಸ್ವಾಮೀಜಿಯವರು ನೆರೆದ ಭಕ್ತವೃಂದಕ್ಕೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಅಯ್ಯಪ್ಪ ಸನ್ನಿಧಿಯಲ್ಲಿ ಕಳೆದ 32 ವರ್ಷಗಳಿಂದ ಪೂಜೆ ನಡೆಯುತ್ತಾ ಬಂದಿದ್ದು ಪ್ರಥಮ ಬಾರಿಗೆ ಭೇಟಿ ನೀಡಿದ ತಮಗೂ ಈ ಸನ್ನಿಧಿಯ ಶಕ್ತಿಭಕ್ತಿಯ ಸಮ್ಮಿಲನದ ಅನುಭವ ಆಗಿದ್ದು ಈ ಸನ್ನಿಧಿಯು ಮುಂದೊಂದು ದಿನ ಧಾರ್ಮಿಕ ಶಕ್ತಿಕೇಂದ್ರವಾಗಿ ಮಾರ್ಪಡುವ ಎಲ್ಲಾ ಲಕ್ಷಣಗಳೂ ಇವೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಎಲ್ಲ ಸಹಾಯ ಸಹಕಾರವಿರುವುದಾಗಿ ಭರವಸೆ ನೀಡಿದರು.

ಖ್ಯಾತ ಉದ್ಯಮಿ ಮುರಳೀಧರ ಪ್ರಭು ಅವರು ಮಾತನಾಡಿ ಪುಣ್ಯಕ್ಷೇತ್ರ ಗೋಕರ್ಣಕ್ಕೆ ಈ ಸ್ಥಳ ಹೆಬ್ಬಾಗಿಲು. ಇಲ್ಲಿ ನಿರ್ಮಾಣವಾಗುತ್ತಿರುವ ಗುಡಿಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಈ ಗುಡಿಯ ನಿರ್ಮಾಣಕ್ಕೆ ತಮ್ಮ ಸಂಪೂರ್ಣ ಸಹಾಯ ಸಹಕಾರವಿದೆ ಎಂದು ನುಡಿದರು.

ಈ ಕಾರ್ಯಕ್ರಮಕ್ಕೆ ರಾಜೇಶ ಮಹಾಲೆಯವರು ಎಲ್ಲರನ್ನೂ ಸ್ವಾಗತಿಸಿದರು. ರಮೇಶ ನಾಯ್ಕರವರು ವಂದಿಸಿದರು.
ಈ ಸಂದರ್ಭದಲ್ಲಿ ಡಾ|| ಜಿ.ಜಿ. ಹೆಗಡೆ, ಅರುಣ ಕವರಿ, ಕೆ.ಕೆ.ಭಟ್ ಹಿಲ್ಲೂರು ಮುಂತಾದ ಗಣ್ಯರು ಉಪಸ್ಥಿತರಿದ್ದರು