Home Food ಅಡುಗೆಮನೆಯಲ್ಲಿ ಬೇಗ ಕೆಲಸ ಮುಗಿಸಬೇಕೆ? ಹಾಗಾದರೆ ಈ ಟಿಪ್ಸ್’ ಗಳನ್ನು ಅನುಸರಿಸಿ!

ಅಡುಗೆಮನೆಯಲ್ಲಿ ಬೇಗ ಕೆಲಸ ಮುಗಿಸಬೇಕೆ? ಹಾಗಾದರೆ ಈ ಟಿಪ್ಸ್’ ಗಳನ್ನು ಅನುಸರಿಸಿ!

SHARE

ಮನೆಯಲ್ಲಿಯೇ ಇರುವವರು ತಮ್ಮ ದಿನದ ಅರ್ಧ ಪಾಲನ್ನು ಅಡುಗೆಮನೆಯಲ್ಲಿಯೇ ಕಳೆಯುತ್ತಾರೆ. ಕೊನೆಗೆ ಇಷ್ಟು ಅಡುಗೆ ಮಾಡುವುದಕ್ಕೇ ಇಡೀ ದಿನ ಬೇಕಾ ಎಂಬ ಮಾತನ್ನೂ ಕೇಳಬೇಕಾಗುತ್ತದೆ. ಅಡುಗೆ ಮಾಡುವುದು ಸುಲಭ ವಿಧಾನವಾದರೂ ಅಲ್ಲಿ ಆಗುವ ಸಣ್ಣಪುಟ್ಟ ಸಮಸ್ಯೆಗಳು ಕಿರಿಕಿರಿಯನ್ನು ಉಂಟುಮಾಡುವುದಲ್ಲದೇ ಸಮಯವನ್ನೂ ಕೊಲ್ಲುತ್ತದೆ.

ಕೆಳಗೆ ಕೊಟ್ಟಿರುವ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದರೆ ನೀವು ಬೇಗನೆ ಕೆಲಸ ಮುಗಿಸಿ ಅಡುಗೆ ಮನೆಯಿಂದ ಹೊರಬರಬಹುದು.

ಬೇಳೆಯ ಸ್ವಾದ ಹೆಚ್ಚಲು ಬೇಯಿಸುವ ಮೊದಲು ಸ್ವಲ್ಪ ಹುರಿದುಕೊಳ್ಳಬೇಕು.
ಖೀರ್‌ ಮಾಡುವ ಮೊದಲು ಪಾತ್ರೆಗೆ ಸ್ವಲ್ಪ ನೀರು ಹಾಕಿ ನಂತರ ಹಾಲು ಹಾಕಬೇಕು. ಈ ರೀತಿ ಮಾಡಿದರೆ ಪಾತ್ರೆಯ ತಳಕ್ಕೆ ಹಾಲು ಹಿಡಿಯುವುದಿಲ್ಲ.
ಆಲೂಗಡ್ಡೆ ಬೇಯಿಸುವಾಗ ಚಿಟಕಿ ಉಪ್ಪು ಹಾಕಿದರೆ ಸಿಪ್ಪೆ ತೆಗೆಯಲು ಸುಲಭವಾಗುತ್ತದೆ.
ಇಡ್ಲಿ ಮೃದುವಾಗಲು ಬಂಧಕ್ಕೆ ಸ್ವಲ್ಪ ಅನ್ನ ಸೇರಿಸಬೇಕು.

ಈರುಳ್ಳಿ ಕತ್ತರಿಸುವ 10 ನಿಮಿಷ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಕಣ್ಣಲ್ಲಿ ನೀರು ಬರುವುದಿಲ್ಲ.
ಕತ್ತರಿಸಿದ ಹಣ್ಣು ಕಪ್ಪಾಗದಂತೆ ತಡೆಯಲು ಹಣ್ಣಿನ ಮೇಲೆ ನಿಂಬೆ ರಸ ಹಚ್ಚಬೇಕು.
ಪೂರಿ ಗರಿಗರಿಯಾಗಬೇಕಾದರೆ ಹಿಟ್ಟಿಗೆ ಸ್ವಲ್ಪ ರವೆ ಮಿಕ್ಸ್‌ ಮಾಡಬೇಕು.
ತರಕಾರಿ ಹಾಗೂ ಹಣ್ಣುಗಳು ತಾಜಾ ಇರಬೇಕೆಂದ್ರೆ ಅವುಗಳನ್ನು ಪೇಪರ್‌ ನಲ್ಲಿ ಸುತ್ತಿಡಬೇಕು.
ಅನ್ನ ಮುದ್ದೆಯಾಗದಂತೆ ಬೇಯಿಸುವ ಮೊದಲು ಚಿಟಕಿ ಎಣ್ಣೆ ಹಾಕಬೇಕು.
ಪಕೋಡಾ ಮಾಡುವ ಮೊದಲು ಎಣ್ಣೆಗೆ ಸ್ವಲ್ಪ ಉಪ್ಪು ಹಾಕಿದರೆ ಜಾಸ್ತಿ ಎಣ್ಣೆ ಹೀರಿಕೊಳ್ಳುವುದಿಲ್ಲ.
ಬೇಳೆ ಅಥವಾ ತರಕಾರಿ ಬೇಯಿಸುವಾಗ ನೀರು ಜಾಸ್ತಿಯಾದರೆ ಚೆಲ್ಲಬಾರದು. ಆ ನೀರು ಬಳಸಿ ಸಾಂಬಾರ್‌ ಮಾಡಬೇಕು. ಪೌಷ್ಟಿಕಾಂಶ ಸಿಗುತ್ತದೆ.
ರೊಟ್ಟಿ ಮೃದುವಾಗಬೇಕಾದರೆ ಹಿಟ್ಟಿಗೆ ಬಿಸಿ ನೀರಿನ ಜೊತೆಗೆ ಬಿಸಿ ಹಾಲು ಹಾಕಬೇಕು.