Home Local ಶ್ರೀಗಳ ಪ್ರೇರಣೆಯಿಂದ ವಾಲ್ಗಳ್ಳಿ ವಲಯದವರಿಂದ ರಕ್ತದಾನ.

ಶ್ರೀಗಳ ಪ್ರೇರಣೆಯಿಂದ ವಾಲ್ಗಳ್ಳಿ ವಲಯದವರಿಂದ ರಕ್ತದಾನ.

SHARE

ಕುಮಟಾ : ಶ್ರೀ ರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂಯೋಜನೆಗೊಂಡ ಕುಮಟಾ ಮಂಡಲಾಂತರ್ಗತ ವಾಲಗಳ್ಳಿ ವಲಯದ ಕಾರ್ಯಕರ್ತರಿಂದ ರಕ್ತದಾನ ಕಾರ್ಯಕ್ರಮ ನಡೆಯಿತು .

ಕುಮಟಾ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು . ಬೇರೆ ಬೇರೆ ವಲಯದ ಕಾರ್ಯಕರ್ತರು ಪ್ರತಿವಾರ ಈ ರೀತಿ ರಕ್ತದಾನ ಮಾಡುವುದರ ಮೂಲಕ ರಕ್ತದಾನದ ಮಹತ್ವವನ್ನು ಸಮಾಜಕ್ಕೆ ಸಾರುವ ಜೊತೆಗೆ ಆಪತ್ತಿನಲ್ಲಿರುವ ಜೀವ ರಕ್ಷಣೆಗೆ ಮುಂದಾಗುತ್ತಿರುವುದು ವಿಶೇಷವಾಗಿದೆ .

ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ರಕ್ತದಾನದ ಮಹತ್ವದ ಕುರಿತಾದ ನುಡಿಗಳನ್ನು ಕೇಳಿ ಅದರ ಪ್ರೇರಣೆಯಿಂದ ಪ್ರತಿ ವಾರ ಈ ರೀತಿ ಬೇರೆ ಬೇರೆ ವಲಯದ ಕಾರ್ಯಕರ್ತರು ರಕ್ತದಾನ ಮಾಡುತ್ತಿರುವುದು ವಿಶೇಷವಾಗಿದೆ .

ಇದೇ ರೀತಿ ವಾಲಗಳ್ಳಿ ವಲಯದ ಕಾರ್ಯಕರ್ತರು ಹಾಗೂ ಮಾತೆಯರು ಕುಮಟಾದ ಬ್ಲಡ್ ಬ್ಯಾಂಕ್ನಲ್ಲಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು .ಈ ಸಂದರ್ಭದಲ್ಲಿ ಪ್ರಮುಖರಾದ ಗಣೇಶ ಭಟ್ಟ ಕೂಜಳ್ಳಿ, ವಿನಾಯಕ ಹೆಗಡೆಕಟ್ಟೆ, ಕೆ.ಜಿ ಪ್ರಶಾಂತ ಹಾಗೂ ಇನ್ನಿತರರು ಹಾಜರಿದ್ದರು.

ನಿರಂತರವಾಗಿ ಸಮಾಜದಲ್ಲಿ ಇಂತಹ ಉಪಯುಕ್ತ ಕಾರ್ಯಗಳು ನಡೆಯುತ್ತಿರಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ .