Home Important ಟಿಕೆಟ್ ಹಂಚಿಕೆ ಹೈಕಮಾಂಡ್ ಮಾತ್ರ ಮಾಡಲಿದೆ- ಅಮಿತ್ ಶಾ !

ಟಿಕೆಟ್ ಹಂಚಿಕೆ ಹೈಕಮಾಂಡ್ ಮಾತ್ರ ಮಾಡಲಿದೆ- ಅಮಿತ್ ಶಾ !

SHARE

ಬೆಂಗಳೂರು: 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ, ಹೈಕಮಾಂಡ್ ನ್ನು ಹೊರತುಪಡಿಸಿ ಯಾರೂ ಟಿಕೆಟ್ ವಿಚಾರವಾಗಿ ಮಧ್ಯಪ್ರವೇಶಿಸುವಂತಿಲ್ಲ ಎಂದು ರಾಜ್ಯ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ.

ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಡಿ.31 ರಂದು ಬಿಜೆಪಿ ನಾಯಕರ ಸಭೆ ನಡೆದಿದ್ದು ಚುನಾವಣೆಗೆ ರಣತಂತ್ರ ಹೆಣೆಯುವುದರ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಚುನಾವಣೆ ತಯಾರಿ ಬಗ್ಗೆ ರಾಜ್ಯ ನಾಯಕರಿಗೆ ಪಾಠ ಮಾಡಿರುವ ಅಮಿತ್ ಶಾ, ಟಿಕೆಟ್ ಬಗ್ಗೆ ರಾಜ್ಯದ ಯಾವುದೇ ನಾಯಕರು ಬಹಿರಂಗ ಘೋಷಣೆ ಮಾಡುವಂತಿಲ್ಲ, ರ್ಯಾಲಿಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುವಂತಿಲ್ಲ, ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹೈಕಮಾಂಡ್ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಚರ್ಚೆಯಾಗುವ, ಹೆಣೆಯಲಾಗುವ ತಂತ್ರಗಳ ಬಗ್ಗೆ ರಾಜ್ಯ ನಾಯಕರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವಂತಿಲ್ಲ ಎಂದು ಅಮಿತ್ ಶಾ ಹೇಳಿದ್ದು ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.