Home Important ಮುಳುಗುತ್ತಿದ್ದ ಮೀನುಗಾರರ ರಕ್ಷಣೆ

ಮುಳುಗುತ್ತಿದ್ದ ಮೀನುಗಾರರ ರಕ್ಷಣೆ

SHARE
ಮಂಗಳೂರು: ಸಮುದ್ರ ಮಧ್ಯೆ ಪ್ರವಾಹಕ್ಕೆ ಸಿಲುಕಿ ಮುಳುಗುತ್ತಿದ್ದ ದೋಣಿಯಲ್ಲಿದ್ದ ಏಳು ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬುಧವಾರ ರಕ್ಷಿಸಿದೆ.
ಮಂಜೇಶ್ವರಿ ಎಂಬ ಗಿಲ್ ನೆಟ್ ದೋಣಿ ಇಂದು ಬೆಳಗ್ಗೆ ಮಲ್ಫೆ ಬಂದರಿಗೆ ತೆರಳುತ್ತಿದ್ದ ವೇಳೆ ಮೂರು ಕಿ.ಮೀ. ಕ್ರಮಿಸಿದ ನಂತರ ತಣ್ಣೀರು ಬಾವಿ ಸಮೀಪ ತೀವ್ರ ಅಲೆಗಳ ಪರಿಣಾಮ ಪ್ರವಾಕ್ಕೆ ಸಿಲುಕಿತ್ತು. ಅಪಾಯದ ಮುನ್ಸೂಚನೆಯನ್ನು ಅರಿತ ಮೀನುಗಾರರು ಅಲರಾಂ ನೀಡಿದ ಹಿನ್ನೆಲೆಯಲ್ಲಿ ಕರಾವಳಿ ರಕ್ಷಣಾ ಪಡೆ ತಂಡ ತಕ್ಷಣ ನೆರವಿಗೆ ಧಾವಿಸಿ ಮೀನುಗಾರರಿಗೆ ರಕ್ಷಣೆ ಒದಗಿಸಿದೆ.
ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಕರಾವಳಿ ಪಡೆಯ ರಾಜದೂತ್ ನೌಕೆ ಸ್ಥಳಕ್ಕೆ ತೆರಳಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿ ಎನ್ಎಂ ಪಿಟಿ ಬಂದರಿಗೆ ತಲುಪಿಸಿದೆ.