Home Local ಚಿತ್ರಿಗಿ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಂಭ್ರಮ.

ಚಿತ್ರಿಗಿ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಂಭ್ರಮ.

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು ದಿ.4 ರಂದು ನಡೆಯಲಿದ್ದು ಬೆಳಿಗ್ಗೆ 1030 ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಯಮಿ ಮೋಹನ ಶಾನಭಾಗ ಉದ್ಘಾಟಿಸಲಿದ್ದು ಕೆನರಾ ಎಜ್ಯುಕೇಶನ ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು ಅಧ್ಯಕ್ಷತೆ ವಹಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯ ಉದ್ದಿಮೆದಾರ ನಾಗೇಶ ಶಾನಭಾಗ ಮತ್ತು ಕೆ.ಇ.ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಆಗಮಿಸಲಿದ್ದಾರೆ. ಅಪರಾಹ್ನ 5 ಗಂಟೆಗೆ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ನಡೆಯಲಿದ್ದು ವೇದಿಕೆಯನ್ನು ಕೆ.ಇ.ಸೊಸೈಟಿಯ ಅಧ್ಯಕ್ಷ ಡಾ. ಆರ್.ಆರ್.ಶಾನಭಾಗ ಉದ್ಘಾಟಿಸಲಿದ್ದಾರೆ.

ಕೆ.ಇ.ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ಯಶ್ವಂತ ಪ್ರಭು ಅಧ್ಯಕ್ಷತೆ ವಹಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್ ಗಪಾರ್ ಮುಲ್ಲಾ ಅಮರ ಜ್ಯೋತಿ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಗೌರವ ಅತಿಥಿಯಾಗಿ ಕುಮಟಾ ಖಜಾನಾಧಿಕಾರಿ ಬಿ.ಡಿ.ನಾಯ್ಕ ಆಗಮಿಸಲಿದ್ದಾರೆ.

ಅದಕ್ಕೂ ಮೊದಲು ನಡೆಯುವ ಮಕ್ಕಳ ಸಂತೆಯನ್ನು ಜಿ.ಎಸ್.ಬಿ.ಯುವ ಸೇವಾವಾಹಿನಿ ಅಧ್ಯಕ್ಷ ಮುಕುಂದ ಶಾನಭಾಗ ಹೆಗಡೆಕರ್ ಉದ್ಘಾಟಿಸಲಿದ್ದಾರೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.