Home Local ಪ್ರಗತಿ ವಿದ್ಯಾಲಯ ಭರತನಹಳ್ಳಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ ಸಂಪನ್ನ.

ಪ್ರಗತಿ ವಿದ್ಯಾಲಯ ಭರತನಹಳ್ಳಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ ಸಂಪನ್ನ.

SHARE

ಭರತನಹಳ್ಳಿ : ಯಲ್ಲಾಪುರ ತಾಲೂಕಿನ ಪ್ರಗತಿ ವಿದ್ಯಾಲಯ ಭರತನಹಳ್ಳಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷರಾಗಿ ಶ್ರೀ ಹೇರಂಭ ಪಿ ಹೆಗಡೆ ಅಧ್ಯಕ್ಷರು ಪ್ರಗತಿ ಶಿಕ್ಷಣ ಸಂಸ್ಥೆ ವಹಿಸಿದರು.ಪ್ರಗತಿ ಕೈ ಭರಹ ಪತ್ರಿಕೆಯನ್ನು ಶ್ರೀ ಡಿ.ಜಿ.ಹೆಗಡೆ ತಹಶೀಲ್ದಾರರು ಅನಾವರಣ ಗೊಳಿಸಿದರು.ವಿದ್ಯಾರ್ಥಿಗಳಿಂದ ರಚಿತವಾದ ವಿವಿಧ ರೀತಿಯ ವಿಜ್ಞಾನ ಮಾದರಿ ಹಾಗೂ ಕರಕುಶಲ ವಸ್ತು ಪ್ರದರ್ಶನ ಉದ್ಘಾಟನೆಯನ್ನು ಶ್ರೀ ಎನ್ ಆರ್ ಹೆಗಡೆ.ಕ್ಷೇತ್ರ ಶಿಕ್ಷಣಾದಿಕಾರಿಗಳು ಯಲ್ಲಾಪುರ ಮಾಡಿದರು.ಪ್ರಗತಿಯಲ್ಲಿ ಕಲಿತು ಇಂದು ಡೈರೆಕ್ಟರ್ & ಪೌಂಡರ್ ,ಇಥರ್ ಡೇ ಲೈಟ್ ಸಿಸ್ಟಮ್ ಬೆಂಗಳೂರು ಆಗಿರುವಂಥ ಶ್ರೀ ವಿಶ್ವೇಶ್ವರ ಹೆಗಡೆ ಇವರು ಇಂದು ಶಾಲೆಯ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಕವನ್ನು ನೀಡಿ ಉದ್ಘಾಟ‌ನೆಯನ್ನು ಮಾಡಿದರು.ಇದೇ ಸಂಧರ್ಭದಲ್ಲಿ ಶಾಲಾ ೨೦೧೬-೨೦೧೭ ರಲ್ಲಿ ನಡೆದ ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.

೨೦೧೭-೨೦೧೮ ರಲ್ಲಿ ನಡೆದ ಶಾಲಾ ವಾರ್ಷಿಕ ಸ್ಪರ್ದೇಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಗತಿಯಲ್ಲಿ ಕಲಿತ ಹಳೆಯ ವಿಧ್ಯಾರ್ಥಿ ಜೊಯಿಡಾದ ಕ್ಷೇತ್ರ ಶಿಕ್ಷಣಾದಿಕಾರಿಗಳಾದ ಶ್ರೀ ಆರ್ ಎಲ್ ಭಟ್ ಜೋಯಿಡಾ.ಸಹಾಯಕ ನಿರ್ವಾಹಕ ಆರ್ .ಎ.ಗಾಂವ್ಕಾರ್ .ಎಂ ಟಿ ಪಟಗಾರ ಮುಖ್ಯಾದ್ಯಾಪಕರು ‌ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ,ಎನ್ ಕೆ ಭಟ್ ಅಗ್ಗಾಶಿ ಕುಂಬ್ರಿ ಅಧ್ಯಕ್ಷರು ಯಲ್ಲಾಪುರ ಟಿ.ಎಂ.ಎಸ್. ಯಲ್ಲಾಪುರ. ಶ್ರೀ ಸತೀಶ ಹೆಗಡೆ ಯಲ್ಲಾಪುರ ಅಡಕೆ ವರ್ತಕರ ಸಂಘ ಮತ್ತು ಪಾಲಕ ಪೋಷಕರು ಹಾಜರಿದ್ದರು