Home Article ನಾಲಿಗೆ ಬಳಸುವಾಗ ಎಚ್ಚರವಿರಲಿ

ನಾಲಿಗೆ ಬಳಸುವಾಗ ಎಚ್ಚರವಿರಲಿ

SHARE

‘ಕತ್ತಿ ಬಳಸುವಾಗ ಎಚ್ಚರಿಲ್ಲದಿದ್ದರೂ, ನಾಲಿಗೆ ಬಳಸುವಾಗ ಎಚ್ಚರವಿರಲಿ’ ನಾಲಿಗೆ ಸರಿ ಇದ್ದರೆ ಲೋಕವೇ ಸರಿ. ನಮ್ಮ ಇಂದ್ರಿಯಗಳನ್ನು ನಾವು ವಶದಲ್ಲಿಟ್ಟುಕೊಳ್ಳಬೇಕು. ಇಂದ್ರಿಯಗಳನ್ನು ಯಾರು ವಶದಲ್ಲಿಟ್ಟುಕೊಳ್ಳುವರೋ ಅವರು ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗುತ್ತಾರೆ. ನಾಲಿಗೆ ಮತ್ತು ಹಲ್ಲಿಗೆ ಒಮ್ಮೆ ಜಗಳವಾಯಿತಂತೆ. ಕಾರಣವಿಷ್ಟೇ ಒಮ್ಮೆ ತುಟಿ ಒಣಗಿದಾಗ ಒದ್ದೆ ಮಾಡಲು ನಾಲಿಗೆ ಹೊರ ಬಂತು. ಹಲ್ಲುಗಳು ಆ ಸಂದರ್ಭದಲ್ಲಿ ಕಚ್ಚಿದವು ಪ್ರತಿಕಾರಕ್ಕಾಗಿ ಸಮಯ ಕಾಯುತ್ತಿದ್ದ ನಾಲಿಗೆ ಧಡಿಯನೊಬ್ಬ ಎದುರುಬಂದ ಸಮಯ ನೋಡಿ ನಾಲ್ಕು ಅವಾಚ್ಯ ಶಬ್ಧಗಳನ್ನು ಮಾತನಾಡಿತು, ಕೋಪದಿಂದ ಆತ ಬಡಿದಾಗ 4 ಹಲ್ಲುಗಳು ಉದುರಿ 28 ಅದುರಿಹೋದವು.

ವಿನಾಕಾರಣ ಇನ್ನೊಬ್ಬರಿಗೆ ತೊಂದರೆಕೊಟ್ಟರೆ, ಸುಳ್ಳು ಹೇಳಿದರೆ, ಅಹಂಕಾರದಿಂದ ಮೆರೆದರೆ ನಾವು ಕೆಳಕ್ಕೆ ಬೀಳುತ್ತೇವೆ ಎಂಬುದಕ್ಕೆ ನಿದರ್ಶನವಿದು.

‘ನಾನು’ ಎಂಬುದನ್ನು ಬಿಟ್ಟು ಎಲ್ಲರಲ್ಲೂ ಒಂದಾಗೋಣ, ಅಂದಾಗ ಮಾತ್ರ ಚಂದದ ಜೀವನ ನಮ್ಮದಾಗಲು ಸಾಧ್ಯ. ಬೇರೆಯವರ ಬಗ್ಗೆ ಕೀಳು ಭಾವನೆ ಬೇಡ, ನಾನೇ ಶ್ರೇಷ್ಠನೆಂಬ ಅಹಂಕಾರ ಬೇಡ. ಇತರರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ನಮ್ಮನ್ನು ನಾವು ಗೆದ್ದರೆ ಮಾತ್ರ ಜಗತ್ತನ್ನು ಗೆಲ್ಲಲು ಸಾಧ್ಯ. ನಮ್ಮನ್ನು ನಾವು ಗೆಲ್ಲಲಾಗದಿದ್ದರೆ ನಾಶವಾಗುತ್ತೇವೆ.