Home Local ಶಾಲೆಯಲ್ಲೇ ಕುಸಿದು ಮೃತಪಟ್ಟ ವಿದ್ಯಾರ್ಥಿ

ಶಾಲೆಯಲ್ಲೇ ಕುಸಿದು ಮೃತಪಟ್ಟ ವಿದ್ಯಾರ್ಥಿ

SHARE

ಜೊಯಡಾ : ಪಾಠ ನಡಿಯುತ್ತಿರುವ ವೇಳೆ ಕುಸಿದುಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ಜೊಯಡಾದ ಕಿರಿಯ ಪ್ರಾಥಮಿಕ ಶಾಲೆ ಮಲಕರಣಿಯಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಕೃಷ್ಣ ಕುಣಬಿ ಮೃತ ವಿಧ್ಯಾರ್ಥಿಯಾಗಿದ್ದು ಈತ ಮಲಕರಣಿ ಶಾಲೆಯ ೪ ತರಗತಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಶಾಲೆಗೆ ಬಂದ ಬಾಲಕ ಏಕಾಏಕಿ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಶಾಲೆಗೆ ತಾಲೂಕು ಶಿಕ್ಷಾಧಿಕಾರಿಗಳು ದೌಡಾಯಿಸಿದ್ದಾರೆ. ಜೊಯಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.