Home Local ಹೊನ್ನಾವರದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ.

ಹೊನ್ನಾವರದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ.

SHARE

ಹೊನ್ನಾವರ : ಜಿಲ್ಲಾ ಪಂಚಾಯತ್ ಉತ್ತರಕನ್ನಡ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ
ಹೊನ್ನಾವರದ ಸೆಂಟ್ ಅಂಥೋನಿ ಪ್ರೌಢಶಾಲೆಯ ಮೈದಾನದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟದ ಉದ್ಘಾಟನೆಯನ್ನು ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿಯವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಅಂಗದ ನ್ಯೂನ್ಯತೆ ದೇಹಕ್ಕೆ ಮಾತ್ರ ಅದು ಮನಸ್ಸಿಗೆ ಅಲ್ಲ.ಮನಸ್ಸಿದ್ದರೆ ಎಂತಹುದೇ ಸಾಧನೆ ಮಾಡಬಹುದು ಎಂಬುದಕ್ಕೆ ಇದು ಪೂರಕವಾದ ವಾತಾವರಣವಾಗಿದೆ, ಇಂತಹ ಕ್ರೀಡಾಕೂಟ ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಉಲ್ಲಾಸ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪ ನಾಯ್ಕ, ಜಿ.ಎಸ್.ನಾಯ್ಕ್,ವಿನಾಯಕ ಶೇಟ್,ಜಗದೀಪ ತೆಂಗೇರಿ, ಸಾಧನ ಬರ್ಗಿ ಮುಂತಾದವರು ಉಪಸ್ಥಿತಿದ್ದರು.