Home Local ವಿದ್ಯುತ್ ಸಂಪರ್ಕ ಕಾಮಗಾರಿಗೆ ಚಾಲನೆನೀಡಿದ ಶಾಸಕರಾದ ಶಾರದಾ ಮೋಹನ ಶೆಟ್ಟಿ.

ವಿದ್ಯುತ್ ಸಂಪರ್ಕ ಕಾಮಗಾರಿಗೆ ಚಾಲನೆನೀಡಿದ ಶಾಸಕರಾದ ಶಾರದಾ ಮೋಹನ ಶೆಟ್ಟಿ.

SHARE

ಹೊನ್ನಾವರ : ತಾಲ್ಲೂಕಿನ ಸಾಲಕೊಡ ಗ್ರಾಮ ಪಂಚಾಯಿತದ ಮೇಲಿನಕೇರಿಯಲ್ಲಿ 11 ಕೆ ವಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಚಾಲನೆ ನೀಡಿದರು.

ಅಂದಾಜು 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಾಮಗಾರಿ ಜನತೆಗೆ ಅನುಕೂಲತೆ ಕಲ್ಪಿಸಲಿದೆ. ಸಲಕೋಡ ಗ್ರಾ.ಪಂ ಹಾಗೂ ಮೇಲಿನಕೇರಿ ಗ್ರಾಮಸ್ಥರ ಬವಣೆಯನ್ನು ಅರಿತು ಈ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಾದ ಶಾರದಾ ಮೋಹನ ಶೆಟ್ಟಿಯವರು ಜನತೆಗೆ ಅಗತ್ಯ ಹಾಗೂ ಬಹು ಉಪಯುಕ್ತ ಕಾಮಗಾರಿ ಇದಾಗಿದ್ದು ಜನತೆಯ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತದ ಪದಾಧಿಕಾರಿಗಳು,ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಈ ಸಂದರ್ಭದಲ್ಲಿ ಕಾಮಗಾರಿಯನ್ನು ಮಾಡಿಸಿಕೊಟ್ಟ ಶಾಸಕರಿಗೆ ಜನರು ಅಭಿನಂದನೆ ಸಲ್ಲಿಸಿದರು.