Home Local ಅಶ್ವಿನಿದಾಮದಿಂದ ಕಾನೂನು ಉಲ್ಲಂಘನೆ

ಅಶ್ವಿನಿದಾಮದಿಂದ ಕಾನೂನು ಉಲ್ಲಂಘನೆ

SHARE

ಕುಮಟಾ : ತಾಲೂಕಿನ ಹೊಲನಗದ್ದೆ ಪಂಚಾಯತ್ ವ್ಯಾಪ್ತಿಯ ಕಡ್ಲೆಯಲ್ಲಿ ನಿರ್ಮಿಸಿರುವ ಅಶ್ವಿನಿದಾಮ ಆಯುರ್ವೇದದ ಚಿಕಿತ್ಸಾಕೇಂದ್ರದಲ್ಲಿ ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿದ್ದು ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗುವುದು ಎಂದು ಸದಾನಂದ ಹರಿಕಂತ್ರ ಹೇಳಿದರು.

ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅಶ್ವಿನಿದಾಮದಲ್ಲಿ “ಸಿ,ಆರ್,ಝಡ್ ನಿಯಮ ಉಲ್ಲಂಘಿಸಿ 9 ಕಟ್ಟಡ ಕಟ್ಟಿದ್ದಾರೆ. ಈ ಕುರಿತು
ಸಿ,ಆರ್,ಝಡ್ ಅಧಿಕಾರಿಗಳಿಗಿ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ ಹಾಗೂ
ಆಯುರ್ವೆದ ಚಿಕಿತ್ಸಾ ಕೇಂದ್ರದ ಹೆಸರಲ್ಲಿ ಅಕ್ರಮ ಹೋಮ್ ಸ್ಟೇ ನಡೆಸಲಾಗುತ್ತಿದೆ. ಈ ಹೋಮ್ ಸ್ಟೇ ಗೆ ಯಾವುದೇ ಪರವಾನಿಗೆ ಪಡೆದಿಲ್ಲ” ಎಂದರು.

“ಇವರ ಈ ಎಲ್ಲಾ ಕಾನೂನು ಬಾಹಿರ ಚಟುವಟಿಕೆ ವಿರುದ್ದ ಪಂಚಾಯತ್ ಗೆ ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ನೀಡಿದರು ಇನ್ನುವರೆಗೆ ಆವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.” ಆದ್ದರಿಂದ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲಿಸುತ್ತಿರುವ ಪಂಚಾಯತ್ ಅಧಿಕಾರಿಗಳ ವಿರುದ್ಧ ಮತ್ತು ಅಶ್ವಿನಿ ದಾಮದ ಮಾಲಿಕ ರವಿರಾಜ್ ಕಡ್ಲೆ ವಿರುದ್ದ ಸಾರ್ವಜನಿಕ ಹಿತಾಸಕ್ತಿ ದೂರು ನೀಡಲಿದ್ದೇನೆ “ಎಂದರು.