Home Local ಮನೆಗೆ ಹೊತ್ತಿಕೊಂಡ ಬೆಂಕಿ : ಸಮಯಪ್ರಜ್ನೆಯಿಂದ ತಪ್ಪಿತು ಅನಾಹುತ

ಮನೆಗೆ ಹೊತ್ತಿಕೊಂಡ ಬೆಂಕಿ : ಸಮಯಪ್ರಜ್ನೆಯಿಂದ ತಪ್ಪಿತು ಅನಾಹುತ

SHARE

ಭಟ್ಕಳ: ತಾಲೂಕಿನ ಕಾಯ್ಕಿಣಿ ಗ್ರಾಮದ ಗೌಡರಗದ್ದೆ ಮಜಿರೆಯ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಮನೆಮಂದಿಯರೆಲ್ಲ ಅಪಾಯದಿಂದ ಪಾರಾಗಿದ್ದಾರೆ.

ಮನೆಯು ರಂಗ ಸುಬ್ರಾಯ ನಾಯ್ಕ ಎನ್ನುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಮನೆಯಲ್ಲಿದ್ದ ಮಕ್ಕಳ ಪಠ್ಯಪುಸ್ತಕ, ಬೆಲೆಬಾಳುವ ದಾಖಲೆ ಪತ್ರ, ಬಟ್ಟೆ-ಬರೆ ಸೇರಿದಂತೆ ಕಿರಾಣಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ತಗುಲಿದ ಮನೆಯ ಅಕ್ಕಪಕ್ಕದ ನಿವಾಸಿಗರ ಸಮಯಪ್ರಜ್ಞೆಯಿಂದ ಆಗಬಹುದಾದ ಬಾರಿ ಅನಾಹುತವನ್ನು ತಪ್ಪಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಮಾವಳ್ಳಿ ಕಂದಾಯ ನಿರೀಕ್ಷಕ ಚಾನ್ ಬಾಷಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗುಡ್ಡಪ್ಪ ಮತ್ತು ಗ್ರಾಮ ಸಹಾಯಕ ಶ್ರೀನಿವಾಸ ಮಡಿವಾಳ ತೆರಳಿ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಂದಾಜು 50 ಸಾವಿರ ನಷ್ಟವಾದ ಬಗ್ಗೆ ತಿಳಿದು ಬಂದಿದೆ.