Home Local ವಾರ್ಷಿಕ ಸ್ನೇಹ ಸಂಭ್ರಮ ಸಂಪನ್ನ; ಕಲಿಕೆ ನಿರಂತರ ಪ್ರಕ್ರಿಯೆ-ಡಾ.ಆರ್.ಆರ್.ಶಾನಭಾಗ

ವಾರ್ಷಿಕ ಸ್ನೇಹ ಸಂಭ್ರಮ ಸಂಪನ್ನ; ಕಲಿಕೆ ನಿರಂತರ ಪ್ರಕ್ರಿಯೆ-ಡಾ.ಆರ್.ಆರ್.ಶಾನಭಾಗ

SHARE

ಕುಮಟಾ: ಕಲಿಕೆಗೆ ಎಂದಿಗೂ ವಯೋನಿರ್ಭಂದವಿಲ್ಲ. ಅದು ನಿತ್ಯ ನಿರಂತರ ಪ್ರಕ್ರಿಯೆ. ಆದರೆ ಸೂಕ್ತ ಸಮಯದಲ್ಲಿ ಅಗತ್ಯ ಕಲಿಕಾ ಚಟುವಟಿಕೆಗಳನ್ನು ಕರಗತಮಾಡಿಕೊಂಡಾಗ ಅಸಾಧ್ಯವಾದುದನ್ನೂ ಸಾಧಿಸಬಹುದೆಂದು ಕೆನರಾ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಆರ್.ಆರ್.ಶಾನಭಾಗ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜಿ.ಮುಲ್ಲಾ ಅಮರ ಜ್ಯೋತಿ ಸಾಹಿತ್ಯ ಪತ್ರಿಕೆಯನ್ನು ಅನಾವರಣಗೊಳಿಸಿ ಮಕ್ಕಳಲ್ಲಿ ಕೇವಲ ಅಂಕಗಳಿಕೆ ಮುಖ್ಯವಲ್ಲ, ಅವರು ಸಾಂಸ್ಕøತಿಕ, ಸಾಹಿತ್ಯಕ ಹಾಗೂ ಸಾಮಾಜಿಕವಾಗಿ ಬದುಕುವ ಅರಿವು ಹೊಂದುವಲ್ಲಿ ಪರಿಣಿತರಾಗಬೇಕು. ಆ ನಿಟ್ಟಿನಲ್ಲಿ ಗುಣಾತ್ಮಕ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದರಲ್ಲದೇ ಶಾಲಾ ಆಡಳಿತ ಮಂಡಳಿಯ ಕಾರ್ಯ ಕೊಡುಗೆಗಳನ್ನು ಶ್ಲಾಘಿಸುತ್ತಾ ಇಲಾಖೆಯ ಪರವಾಗಿ ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಖಜಾನಾಧಿಕಾರಿ ಬಿ.ಡಿ.ನಾಯ್ಕ ಮಾತನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಎದುರಿಸುವ ಸಾಮಥ್ರ್ಯ ಉತ್ತರ ಕನ್ನಡ ಜಿಲ್ಲೆಯ ಸ್ಪರ್ಧಾಳುಗಳಿಗೆ ಇನ್ನೂ ಸಿದ್ಧಿಸಬೇಕಾಗಿದೆ. ಐಎಎಸ್, ಐಪಿಎಸ್ ಪರೀಕ್ಷೆಗಳನ್ನೂ ಈಗಲೂ ಉತ್ತರ ಭಾರತದವರೇ ಹೊಡೆದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದ್ದು ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳಿಗೆ ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸಿ ಬರೆಯುವ ಚಾಕಚಕ್ಯತೆಯನ್ನು ರೂಢಿಸಿಕೊಡಬೇಕಾದ ಜವಾಬ್ದಾರಿ ನಮ್ಮ ಸಮಾಜ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಇ.ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ಯಶ್ವಂತ ಪ್ರಭು ಮೂಲಭೂತ ಶೈಕ್ಷಣಿಕ ಅಭಿವೃದ್ಧಿಗೆ ಯಾವತ್ತೂ ಆಡಳಿತ ಮಂಡಳಿ ಪೂರಕವಾಗಿ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.

ಪ್ರಾರಂಭದಲ್ಲಿ ಕುಮಾರ ದರ್ಶನ ಪುರಾಣಿಕ ಪ್ರಾರ್ಥನೆಗೈದರು. ಶ್ರೀಲಕ್ಷ್ಮೀ ಭಟ್ಟ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಾಗತಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಪರಿಚಯಿಸಿದರು. ಶಿಕ್ಷಕ ಕಿರಣಪ್ರಭು ಮತ್ತು ಸುರೇಶ ಪೈ, ಪ್ರಶಾಂತ ಗಾವಡಿ ಸಹಕರಿಸಿದರು. ಶಿಕ್ಷಕಿ ಸ್ವಾತಿ ನಾಯ್ಕ ವಂದಿಸಿದರು.