Home Information ಶಾಲಾ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶಾಲಾ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.

SHARE

ಕಾರವಾರ: 2018-19 ಸಾಲಿಗೆ 8ನೇ ತರಗತಿ ಇಂಗ್ಲೀಷ ಮಾಧ್ಯಮ ವಿಭಾಗಕ್ಕೆ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಆಸಕ್ತ ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ವಿಜಯಪೂರ, ಬಾಗಲಕೋಟ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 50 ಸೀಟುಗಳು ಮಾತ್ರ ಲಭ್ಯವಿರುತ್ತವೆ. ಇದರಲ್ಲಿ ಶೇ.50 ರಷ್ಟು ಸಾಮಾನ್ಯ ವರ್ಗದವರಿಗೆ ಉಳಿದ ಶೇ. 50 ರಲ್ಲಿ ಶೇ. 25 ರಷ್ಟು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ. ಶೇ. 25 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಿವೆ. ಎಲ್ಲ ವರ್ಗಗಳಲ್ಲಿ ಶೇ. 50 ರಷ್ಟು ಬಾಲಕಿಯರಿಗೆ ಮೀಸಲಿಡಲಾಗಿದ್ದು, ಅರ್ಜಿ ಸಲ್ಲಿಸಲು ಫೆ.9 ಕೊನೆಯ ದಿನವಾಗಿರುತ್ತದೆ.

ಅರ್ಜಿ ನಮೂನೆಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಹಾಗೂ ಬೆಳಗಾವಿ ವಿಭಾಗದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ನಂದಗಡಗಳಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳ ಜೊತೆಗೆ ಪ್ರವೇಶ ಪತ್ರ ರವಾನೆಗಾಗಿ 5 ರೂ. ಮೌಲ್ಯದ ಸ್ವಯಂ ವಿಳಾಸವ್ಳು ಒಂದು ಅಂಚೆ ಲಕೋಟೆಯನ್ನು ಕಡ್ಡಾಯವಾಗಿ ಅಳವಡಿಸಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ, ತಾ: ಖಾನಾಪೂರ ಜಿ: ಬೆಳಗಾವಿ ಇಲ್ಲಿಗೆ ಕಳುಹಿಸಬೇಕೆಂದು ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.