Home Local ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ರಕ್ಷಣೆ!

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ರಕ್ಷಣೆ!

SHARE

ಮುರ್ಡೇಶ್ವರ : ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ ಯನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರ ಬೀಚ್ ನಲ್ಲಿ ನೆಡೆದಿದೆ.

ಶಿವಮೊಗ್ಗದ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜಿನ ಗಗನ್ (೧೮) ರಕ್ಷಿಸಲ್ಪಟ್ಟ ವಿದ್ಯಾರ್ಥಿ . ಇಂದು ಮುರ್ಡೆಶ್ವರ ಕಡಲ ತೀರದಲ್ಲಿ ಪ್ರವಾಸಕ್ಕೆಂದು ೧೫ ಜನ ವಿದ್ಯಾರ್ಥಿಗಳು ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಬಂದಿದ್ದು ಬೀಚ್ ನಲ್ಲಿ ಈಜುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಈತ ಕೊಚ್ಚಿ ಹೋಗಿದ್ದಾನೆ.

ಈ ಸಂದರ್ಭದಲ್ಲಿ ಕೊಚ್ವಿಹೋಗಿದ್ದನ್ನು ಗಮನಿಸಿದ ಲೈಫ್ ಗಾರ್ಡ ಸಿಬ್ಬಂದಿಗಳಾದ ರೋಹಿತ ಹರಿಕಾಂತ,ಶಶಿಧರ,ಮತ್ತು ಬೋಟ್ ಸಿಬ್ಬಂದಿಗಳು ಈತನನ್ನು ರಕ್ಷಿಸಿದ್ದಾರೆ.

ಸ್ಥಳಕ್ಕೆ ಪ್ರವಾಸೋದ್ಯಮ ಅಧಿಕಾರಿಗಳಾದ ರವಿ ವಾಲೇಕರ್ ಬೇಟಿ ನೀಡಿ ಮಾಹಿತಿಪಡೆದಿದ್ದು ಮುರಡೇಶ್ವರ ಠಾಣೆಗೆ ಮಾಹಿತಿ ನೀಡಿದರು.