Home Local ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚೆಕ್ ಹಸ್ತಾಂತರಿಸಿದ ದಿನಕರ ಶೆಟ್ಟಿ

ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚೆಕ್ ಹಸ್ತಾಂತರಿಸಿದ ದಿನಕರ ಶೆಟ್ಟಿ

SHARE

ಕುಮಟಾ : ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದ ಗೋಕರ್ಣದ ಬಿಜೂರಿನ ಶ್ರೀ ರಾಜು ಗೌಡ ಇವರಿಗೆ ಮಂಜೂರಾಗಿರುವ 40 ಸಾವಿರ ರೂಪಾಯಿ ಚೆಕ್ ಅನ್ನು ಬಿಜೆಪಿ ಮುಖಂಡರು ಮತ್ತು ಮಾಜಿ ಶಾಸಕರೂ ಆದ ದಿನಕರ ಶೆಟ್ಟಿ ಇತ್ತೀಚಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ಚೆಕ್ ವಿತರಿಸುತ್ತಿದ್ದು ಆದಷ್ಟು ಶೀಘ್ರವಾಗಿ ರಾಜು ಗೌಡಾವರ ಆರೋಗ್ಯ ಸುಧಾರಿಸಲಿ ಎಂದರು.

ಇದೇ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದ ಗೋಕರ್ಣದ ಕಮಲಾ ಗೌಡ ಅವರಿಗೆ 15 ಸಾವಿರ ರೂಪಾಯಿಗಳ ಚೆಕ್ ವಿತರಿಸಿ ಆರೋಗ್ಯ ಸುಧಾರಿಸಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳ ಕುಟುಂಬದವರು ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.