Home Local ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳು ಹೆಚ್ಚಬೇಕು : ರೂಪಾಲಿ ನಾಯ್ಕ

ಉದ್ಯೋಗ ಕಲ್ಪಿಸುವ ಕಾರ್ಯಕ್ರಮಗಳು ಹೆಚ್ಚಬೇಕು : ರೂಪಾಲಿ ನಾಯ್ಕ

SHARE

ಅಂಕೋಲಾ :ತಾಲೂಕಿನ ಪ್ರಸಿದ್ಧ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಕ ಬ್ರಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ದ ಪ್ರಭಾರಿಯಾದ ಶ್ರೀಮತಿ ರೂಪಾಲಿ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟಕರಾಗಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ದ ಪ್ರಭಾರಿಯಾದ ಶ್ರೀಮತಿ ರೂಪಾಲಿ ನಾಯ್ಕ ಉದ್ಯೋಗ ಇಂದಿನ ಅನಿವಾರ್ಯತೆಯಾಗಿದೆ. ಬದುಕಿಗೆ ಉದ್ಯೋಗ ಬೇಕೇ ಬೇಕು. ಬದುಕಿಗೆ ಆಧಾರ ನೀಡಬಲ್ಲ ಕಾರ್ಯಕ್ರಮ ಇದಾಗಿದ್ದು ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಮೂಡಿಬರಲಿ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಆರ್. ನಟರಾಜ ಹಾಗೂ ಗೌರವ ಉಪಸ್ತಿತಾಗಿ ಶ್ರೀಮತಿ ಡಾ|| ಮಿನಲ್ ನಾರ್ವೇಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉದ್ಯೋಗ ಆಕಾಂಕ್ಷಿಗಳಿಗೆ ಉಪಯುಕ್ತ ಹಾಗೂ ಉದ್ಯೋಗದ ಮಾಹಿತಿ ನೀಡುವ ಕಾರ್ಯ ಜನ ಮೆಚ್ಚುಗೆಗಳಿಸಿತು.