Home Local ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ; ಸಂಸದ ಪ್ರಹ್ಲಾದ್‌ ಜೋಶಿ

ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ; ಸಂಸದ ಪ್ರಹ್ಲಾದ್‌ ಜೋಶಿ

SHARE

ದಾಂಡೇಲಿ: ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ಸಿನ ಭ್ರಷ್ಟಾಚಾರ, ಭೂಹಗರಣ, ಆಡಳಿತದ ವೈಫಲ್ಯತೆಯಿಂದ ಜನ ಬೇಸತ್ತಿದ್ದಾರೆಂದು ಸಂಸದ ಪ್ರಹ್ಲಾದ್‌ ಜೋಶಿ ನುಡಿದರು.

ಅವರು ನಗರದ ಮರಾಠ ಸಮುದಾಯ ಭವನದಲ್ಲಿ ಬೂತ್‌ ಸಶಕ್ತಿಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಪಜಾ, ಪಂಗಡ ಹಾಗೂ
ಹಿಂದುಳಿದ ಜನರಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಿದೆ. ಮೋದಿಜಿ ಸಾಧನೆ ಮನೆ-ಮನೆಗೆ ತಲಿಪಿಸುವ ಕಾರ್ಯವನ್ನು ಬೂತ ಮಟ್ಟದ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದರು.

ಮೋದಿಜಿ ಕಾರ್ಯದಿಂದ ಬಡವರ ಬೇಡಿಕೆ ಈಡೇರಿಸಲು ಸಾಧ್ಯವಾಗಿದೆ. ರಾಜ್ಯದ ಬಹುತೇಕ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಈ ಹಣದ ಸದ್ಬಳಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಸಿದರು. ಮಾಜಿ ಶಾಸಕ ಸುನಿಲ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡುತ್ತ ಬಿಜೆಪಿ ಗೆಲುವಿಗಾಗಿ ಬೂತ ಮಟ್ಟದ ಕಾರ್ಯಕರ್ತರು ಹೆಚ್ಚು ಪರಿಶ್ರಮ ಮಾಡಲು ಕಂಕಣ ಬದ್ಧರಾಗಬೇಕಾಗಿದೆ ಎಂದರು.

ಬಿಜೆಪಿ ಹಳಿಯಾಳ ಅಧ್ಯಕ್ಷ ಶಿವಾಜಿ ನರಸಾನಿ, ಜೊಯಿಡಾ ಅಧ್ಯಕ್ಷ ತುಕಾರಾಮ ಮಂಜರೇಕರ, ಜಿಲ್ಲಾ ಕಾಯದರ್ಶಿ ಸುಧಾಕರ ರೆಡ್ಡಿ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ರಫಿಕ್‌ ಹುದ್ದಾರ, ಮುಖಂಡರಾದ ಮಂಗೇಶ ದೇಶಪಾಂಡೆ, ಚಂದ್ರಕಾಂತ ಕ್ಷೀರಸಾಗರ, ಅಶೋಕ ಪಾಟೀಲ, ಜಿ.ಆರ್‌.
ಪಾಟಿಲ, ಶಾರದಾ ಪರಶುರಾಮ, ದೇವಕ್ಕ ಕೆರಿಮನಿ, ಎಸ್‌.ಎ.ಶೆಟ್ಟಣ್ಣವರ, ಎನ್‌.ಎಸ್‌ ಹೆಗಡೆ, ಅನಿಲ ಮುತ್ನಾಳ, ಉಮೇಶ ಬಾಗತ ಮುಂತಾದವರಿದ್ದರು. ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ ನಿರೂಪಿಸಿದರು.