Home Local ಸಾಮಾನ್ಯರಂತೆ ಪ್ರಸಾದ ವಿತರಿಸಿ ಜನಮನ ಗೆದ್ದ ದಿನಕರ ಶೆಟ್ಟಿ

ಸಾಮಾನ್ಯರಂತೆ ಪ್ರಸಾದ ವಿತರಿಸಿ ಜನಮನ ಗೆದ್ದ ದಿನಕರ ಶೆಟ್ಟಿ

SHARE

ಕುಮಟಾ :ಮಾಜಿ ಶಾಸಕರು ಮತ್ತು ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಸಾಮಾನ್ಯರಂತೆ ದೇವಾಲಯದಲ್ಲಿ ಪ್ರಸಾದ ವಿತರಿಸಿ ಜನಮನ ಗೆದ್ದಿದ್ದಾರೆ .

ಮಾಸೂರಿನ ಶ್ರೀ ಬಬ್ರು ಲಿಂಗೇಶ್ವರ ದೇವಾಲಯದಲ್ಲಿ ಗೊವಿಂದ ಪಟಗಾರ,ಸದಾನಂದ ಪಟಗಾರ,ನಿತ್ಯಾನಂದ ನಾಯ್ಕ ವನ್ನಳಿ,ಇವರೊಂದಿಗೆ ದೇವರ ಪ್ರಸಾದ ವಿತರಿಸಿದ ಅವರು ದೇವರ ಕೃಪೆಗೆ ಪಾತ್ರರಾಗುವ ಜೊತೆಗೆ ಜನಮಾನಸದಲ್ಲಿ ಹಚ್ಚುಳಿಯುವಂತೆ ಮಾಡಿದರು

ಮಾಜಿ ಶಾಸಕರಾದವರು ನಮಗೆ ಸಾಮಾನ್ಯರಂತೆ ಪ್ರಸಾದ ವಿತರಿಸುತ್ತಾರೆ ಎಂದು ಕೆಲ ಜನರು ಹೇಳಿಕೊಂಡರೆ ಇನ್ನು ಕೆಲವರು ಮಾಜಿ ಶಾಸಕರಾದರೂ ಸಾಮಾನ್ಯರಂತೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಜನ ಸಂತಸದಿಂದ ವೀಕ್ಷಿಸಿದರು.

ಆದರೆ ದಿನಕರ ಶೆಟ್ಟಿ ಮಾತ್ರ ಸಾಮಾನ್ಯರಂತೆ ಪ್ರಸಾದ ವಿತರಿಸುತ್ತಾ ದೇವರ ಕೃಪೆಗೆ ಜೊತೆಗೆ ಜನರ ಕೃಪೆಗೆ ಪಾತ್ರರಾದರು .

ದಿನಕರ ಶೆಟ್ಟಿಯವರು ಈ ರೀತಿ ಸಾಮಾನ್ಯರಂತೆ ಕೆಲಸದಲ್ಲಿ ತೊಡಗಿರುವುದನ್ನು ಅವರ ಸ್ನೇಹಿತರು ಅನೇಕ ಬಾರಿ ನೋಡಿದ್ದಾರಂತೆ .ಹೀಗಾಗಿ ನಮಗೆ ಇದೇನೂ ಹೊಸದಲ್ಲ ಎನ್ನುತ್ತಾರೆ .

ಆದರೆ ದೇವಾಲಯಕ್ಕೆ ಬಂದ ಭಕ್ತರಲ್ಲಿ ಮಾಜಿ ಶಾಸಕರೊಬ್ಬರು ಈ ರೀತಿ ಸಾಮಾನ್ಯರಂತೆ ಕೆಲಸ ನಿರ್ವಹಿಸುತ್ತಿರುವುದು ನಿಜಕ್ಕೂ ಆಶ್ಚರ್ಯ ತಂದಿದ್ದಂತೂ ಸುಳ್ಳಲ್ಲ .