Home Local ಕಾರವಾರದ ಬಳಿ ಭೀಕರ ಅಪಘಾತ : ಹಾರಿಹೋಯ್ತು ಪ್ರಾಣಪಕ್ಷಿ.

ಕಾರವಾರದ ಬಳಿ ಭೀಕರ ಅಪಘಾತ : ಹಾರಿಹೋಯ್ತು ಪ್ರಾಣಪಕ್ಷಿ.

SHARE

ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಮದ ಬಿಳಿ ಕ್ರೂಸರ್ ಒಂದು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಕುಷ್ಟಗಿಯಿಂದ ಕ್ರಶರಲ್ಲಿ ಪ್ರಯಾಣಿಕರು ಗೋವಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಒಟ್ಟು 12 ಜನ ಪ್ರಯಾಣಿಕರಿದ್ದ ಕ್ರೂಸರ್ ವಾಹನದಲ್ಲಿ 10 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಚಾಲಕನ ನಿದ್ದೆಯ ಮಂಪರಿನಲ್ಲಿ ಅಪಘಾತ. ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರ ಸ್ಥಿತಿ ಗಂಭೀರವಾಗಿದೆ ಕಾರವಾರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.