Home Local ಹೊನ್ನ ಮಹಾಸತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಾಸಕ ವೈದ್ಯರಿಗೆ ಸನ್ಮಾನ

ಹೊನ್ನ ಮಹಾಸತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಾಸಕ ವೈದ್ಯರಿಗೆ ಸನ್ಮಾನ

SHARE

ಹೊನ್ನಾವರ: ತಾಲೂಕಿನ ಮಂಕಿಯ ಬೋಳೆ ಬಸ್ತಿಯ ಶ್ರೀ ಹೊನ್ನ ಮಹಾಸತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊನ್ನ ಮಹಾಸತಿ ಸ್ಪೋರ್ಟ್ಸ ಕ್ಲಬ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುಂಬಾರಕೇರಿಗೆ ಶಾಸಕ ಮಂಕಾಳ ವೈದ್ಯರು ಮಾಡಿರುವ ಅಭಿವೃದ್ದಿಯನ್ನು ಪರಿಗಣಿಸಿ ಅವರಿಗೆ ಸನ್ಮಾನಿಸಲಾಯಿತು. ಮಂಕಾಳ ವೈದ್ಯರು ರಾಜ್ಯ ಸರ್ಕಾರ ಸಾಲಮನ್ನಾ ಮಾಡಿದಾಗ ಮಂಕಿಯ 731 ರೈತರ ಸುಮಾರು 2.66 ಕೋಟಿ ರೂಪಾಯಿಯ ಸಾಲ ಮನ್ನಾ ಮಾಡಿದ್ದು ರೈತರಿಗೆ ಆಧಾರವಾಗಿದ್ದಾರೆ.

ಹೊಳೆಯ ನೀರು ಗದ್ದೆಗೆ ನುಗ್ಗಿ ಬೆಳೆ ನಾಶವಾಗುತ್ತಿತ್ತು 50 ಲಕ್ಷ ರೂಪಾಯಿ ಮಂಜೂರಿ ಮಾಡಿ ಹೊಳೆಗೆ ತಡೆಗೊಡೆ ನಿರ್ಮಿಸಿದ್ದಾರೆ, ನೀರು ಪುರೈಕೆಗಾಗಿ 10 ಲಕ್ಷ ರೂಪಾಯಿ , ಬೊಳೆ ಬಸ್ತಿ ಕಾಂಕ್ರೀಟ್ ರಸ್ತೆಗೆ 19 ಲಕ್ಷ, ಕುಂಬಾರ ಕೇರಿ ಕಾಂಕ್ರೀಟ್ ರಸ್ತೆಗೆ 14 ಲಕ್ಷ, ಕಲ್ಯಾಣ ಮಂಟಪಕ್ಕೆ 5 ಲಕ್ಷ ಸಾರಸ್ವತ ಕೇರಿಗೆ 10 ಲಕ್ಷ ಸರಿ ಸುಮಾರು 1 ಕೋಟಿಗೂ ಅಧಿಕ ಹಣವನ್ನು ಕುಂಬಾರ ಮಕ್ಕಿಗೆ ನೀಡಿದ್ದಾರೆ. 25 ಲಕ್ಷ ಯಾತ್ರಾ ಭವನಕ್ಕಾಗಿ ಘೊಷಣೆ ಮಾಡಿದ್ದಾರೆ ಅಷ್ಠೇ ಅಲ್ಲದೆ ಮಂಕಿಯ ವಿಶಾಲ ಈಶ್ವರ ನಾಯ್ಕ ಎನ್ನುವ ಹುಡುಗನನ್ನು ಅಮೇರಿಕಾದಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದು ರೈತ ಸಂಘದ ಗಣಪತಿ ನಾಯ್ಕ ಹೇಳಿದರು.

ಉದ್ಘಾಟನೆಯನ್ನು ನೆರವೇಸಿ ಮಾತನಾಡಿದ ಶಾಸಕ ವೈದ್ಯರವರು ನಿಮ್ಮ ಊರಿನ ಅಭಿವೃದ್ದಿ ನಿಮ್ಮಿಂದಲೇ ಆಗಿದೆ. ಒಂದು ಊರಿನ ಅಬಿವೃದ್ದಿ ಅಘಬೆಕೆಂದರೆ ಆ ಉರಿನ ಜನರಿಗೆ ಇದು ನಮ್ಮೂರು ನಮ್ಮ ಜನ ನಮ್ಮೂರಿಗಾಗಿ ನಾನೆನಾದರೂ ಮಾಡಬೇಕು ಎನ್ನುವುದು ಮನಸಲ್ಲಿದ್ದರೆ ಆ ಊರು ಅಭಿವೃದ್ದಿ ಕಾಣುತ್ತದೆ ಅದಕ್ಕೆ ಈ ಊರು ಸಾಕ್ಷಿಯಾಗಿದೆ. ನಾನು ಶಾಸಕನಾಗಿ ಆಯ್ಕೆಯಾದ ಮೆಲೆ ಈಡಿ ಕ್ಷೇತ್ರದಲ್ಲಿ ವಿದ್ಯತ್ ಸಮಸ್ಯೆ ಮನೆ ಇಲ್ಲದಿರುವುದು ಸರಿಯಾದ ರಸ್ತೆ ಸೇತು ಇಲ್ಲದಿರುವುದು ಕಂಡುಕೊಂಡೆ. ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ನಿಮಗಾಗಿ ನಾನು ಕೆಲಸ ಮಾಡಿದ್ದೇನೆ. ಇಲ್ಲಿಯವರೆಗೆ ಸುಮಾರು 7000 ಮನೆಗೆಳಿಗೆ ವಿದ್ಯುತ್ ನೀಡಿದ್ದೇನೆ. ಇನ್ನು 200 ಮನೆಗಳಿಗೆ ಬಾಕಿ ಇದೆ ಅದನ್ನು ಕೊಡುತ್ತೇನೆ ಎಂದರು. ಇನ್ನು ನನ್ನ ಬಗ್ಗೆ ಟೀಕೆ ಮಾಡುವವರಿಗೆ ಆರೋಪ ಮಾಡುತ್ತಿರುವವರಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಯಾಕೆಂದರೆ ನನಗೆ ನನ್ನ ಕ್ಷೆತ್ರದ ಅಭಿವೃದ್ದಿ ಮುಖ್ಯ, ನನ್ನನ್ನು ಟೀಕಿಸುವವರಿಗೆ ಒಳ್ಳೆ ಬುದ್ದಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂಧರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸತೀಶ ನಾಯ್ಕ, ತಾ.ಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲ ನಾಯ್ಕ, ವನಿತಾ ನಾಯ್ಕ ಚಂದ್ರು ಗೌಡ ಉಪಸ್ಥಿತರಿದ್ದರು.