Home Important ಮಾರಾಟಕ್ಕೂ ಮುನ್ನ ಏರ್ ಇಂಡಿಯಾ ನಾಲ್ಕು ಭಾಗ: ಬ್ಲೂಮ್ಬರ್ಗ್ ವರದಿ

ಮಾರಾಟಕ್ಕೂ ಮುನ್ನ ಏರ್ ಇಂಡಿಯಾ ನಾಲ್ಕು ಭಾಗ: ಬ್ಲೂಮ್ಬರ್ಗ್ ವರದಿ

SHARE

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಮಾರಾಟಕ್ಕೂ ಮುನ್ನ 4 ಭಾಗಗಳನ್ನಾಗಿ ಪ್ರತ್ಯೇಕ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ ಎಂದು ಬ್ಲೂಮ್ಬರ್ಗ್ ವರದಿ ಪ್ರಕಟಿಸಿದೆ.

ಏರ್ ಇಂಡಿಯಾ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದ್ದು, ವೈಮಾನಿಕ ಉದ್ಯಮ, ಪ್ರಾದೇಶಿಕ, ಏರ್ ಕ್ರಾಫ್ಟ್ ಸರ್ವೀಸಿಂಗ್ (ground handling) ಹಾಗೂ ಎಂಜಿನಿಯರಿಂಗ್ ಕಾರ್ಯಾಚರಣೆಗಳ ಸಂಸ್ಥೆಗಳನ್ನಾಗಿ ವಿಭಾಗಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಏರ್ ಇಂಡಿಯಾವನ್ನೊಳಗೊಂಡ ಏರ್ ಲೈನ್ ಉದ್ಯಮ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಎಂಬ ಕಡಿಮೆ ದರದ ಸಾಗರೋತ್ತರ ಉದ್ಯಮವನ್ನು ಒಂದೇ ಸಂಸ್ಥೆಯನ್ನಾಗಿಸಲಾಗುತ್ತದೆ, ಈ ಪ್ರಕ್ರಿಯೆ 2018 ರ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ಪ್ರಕಟಿಸಿದೆ.

ಕಳೆದ ವಾರ ಏರ್ ಇಂಡಿಯಾದಲ್ಲಿ ಶೇ.49 ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು.