Home Local ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸನ್ಮಾನ ಕಾರ್ಯಕ್ರಮ

ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸನ್ಮಾನ ಕಾರ್ಯಕ್ರಮ

SHARE

ಕುಮಟಾ: ತಾಲೂಕಿನ ಶ್ರೀ ಬಂಗಾರಮ್ಮ ಗೆಳೆಯರ ಬಳಗ ಮಣಕೋಣ ಇವರ ಸಂಯೋಜನೆಯಲ್ಲಿ ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಗಣ್ಯರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ,ಯುವ ಮುಖಂಡರಾದ ಶ್ರೀಯುತ ರವಿಕುಮಾರ ಮೋಹನ್ ಶೆಟ್ಟಿಯವರು ಭಾಗವಹಿಸಿ ಪಂದ್ಯಾವಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅವರು ವಾಲಿಬಾಲ್ ಪಂದ್ಯದ ಅಂಕಣವನ್ನು ಉದ್ಘಾಟಿಸಿದರು. ಇಂತಹ ಕಾರ್ಯಕ್ರಮ ಯುವಜನತೆಗೆ ಸ್ಪೂರ್ತಿ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ, ಜೆಡಿಎಸ್ ಪ್ರಮುಖ ಪ್ರದೀಪ ನಾಯಕ ದೇವರಬಾವಿ ಹಾಗೂ ಊರಿನ ಪ್ರಮುಖರು ಹಾಜರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು.