Home Local ಕಾಂಗ್ರೆಸ್ ಸರಕಾರವು ತಂದಂತಹ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು : ಶಿವರಾಮ ಹೆಬ್ಬಾರ

ಕಾಂಗ್ರೆಸ್ ಸರಕಾರವು ತಂದಂತಹ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು : ಶಿವರಾಮ ಹೆಬ್ಬಾರ

SHARE

ಮುಂಡಗೋಡ : ರಾಜ್ಯ ಸಿದ್ದರಾಮಯ್ಯ ಸರಕಾರವು ಯಾವತ್ತೂ ರೈತರು ಸಮೃದ್ದರಾಗಿರಬೇಕು ಎಂದು ಮನಗೊಂಡು ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಮಂಗಳವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕೃಷಿ ಭಾಗ್ಯ ಫಲಾನುಭವಿ ಕೃಷಿಹೊಂಡ ನಿರ್ಮಾಣಮಾಡಿಕೊಂಡ 21 ರೈತರಿಗೆ ಚೆಕ್ ವಿತರಣೆ ಮಾಡಿ ಮಾತನಾಡುತ್ತಿದ್ದರು.

ರೈತರ ಜಮೀನುಗಳು ಹಸನಾಗಿರಲೇಂದು ಕೃಷಿಹೊಂಡ ನಿರ್ಮಾಣಮಾಡಿಕೊಳ್ಳಲು ಸೇರಿದಂತೆ ಜಮೀನುಗಳಿಗೆ ನೀರುಹಾಯಿಸಲು ಪೈಪುಗಳನ್ನು ನೀಡುತ್ತಿದೆ. ರೈತರ 50 ಸಾವಿರ ರೂ ಸಾಲಮನ್ನಾ ಮಾಡಿ ಸರಕಾರವು ರೈತರಪರವಾಗಿದೆ ಎಂದು ತೋರಿಸಿಕೊಟ್ಟಿದೆ. ರೈತರ ಅಭಿವೃದ್ದಿ ಸಲುವಾಗಿ ಹಲವಾರು ಯೋಜನೆಗಳನ್ನು ಸರಕಾರವು ಹಾಕಿಕೊಂಡಿದೆ ರೈತರು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿಗೌಡಾ ಪಾಟೀಲ, ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ, ಹಾಗೂ ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್.ಕುಲಕರ್ಣಿ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು