Home Local ಕಾರವಾರದಲ್ಲಿ ಉರುಳಿ ಬಿತ್ತು ಅಣು ತ್ಯಾಜ್ಯಗಳನ್ನು ಸಾಗಿಸುವ ಭಾರಿ ವಾಹನ:ಸೃಷ್ಟಿಯಾಯ್ತು ಕೆಲಕಾಲ ಜನತೆಗೆ ಆತಂಕ

ಕಾರವಾರದಲ್ಲಿ ಉರುಳಿ ಬಿತ್ತು ಅಣು ತ್ಯಾಜ್ಯಗಳನ್ನು ಸಾಗಿಸುವ ಭಾರಿ ವಾಹನ:ಸೃಷ್ಟಿಯಾಯ್ತು ಕೆಲಕಾಲ ಜನತೆಗೆ ಆತಂಕ

SHARE

ಕಾರವಾರ:ಅಣು ತ್ಯಾಜ್ಯಗಳನ್ನು ಸಾಗಿಸುವ ಭಾರಿ ವಾಹನವೊಂದು ತಾಲೂಕಿನ ಬೋಳೆ ಗ್ರಾಮದಲ್ಲಿ ಉರುಳಿಬಿದ್ದ ಪರಿಣಾಮ ಸ್ಥಳೀಯರಲ್ಲಿ ಆತಂಕಕ್ಕೆ ಸೃಷ್ಟಿಸಿದ ಘಟನೆ ಬುಧವಾರ ಸಂಭಿವಿಸಿದೆ.

ಚೆನ್ನೈನಿಂದ ಕಾರವಾರ ಕೈಗಾ ಮಾರ್ಗವಾಗಿ ಅಣುವಿದ್ಯುತ್ ಸ್ಥಾವರಕ್ಕೆ ತೆರಳುತ್ತಿದ್ದ ಎರಡು ಭಾರಿ ವಾಹನಗಳ ಪೈಕಿ ಒಂದು ವಾಹನ ನಿಯಂತ್ರಣತಪ್ಪಿ ರಸ್ತೆ ಬದಿಯಲ್ಲಿ ಉರುಳಿ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಅಲ್ಲದೆ ಕೂಡಲೇ ಸಂಬಂಧಪಟ್ಟ ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅಷ್ಟರಲ್ಲಿಯೇ ಆಗಮಿಸಿದ ಕೈಗಾ ಅಣುಸ್ಥಾವರದ ಅಧಿಕಾರಿಗಳು ವಾಹನದಲ್ಲಿದ್ದ ಕಂಟೆನರ್ ಖಾಲಿಯಾಗಿದ್ದು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

ಆದರೆ ಗ್ರಾಮಸ್ಥರು ಈ ವೇಳೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರವಾರ ಕೈಗಾ ರಸ್ತೆಯಲ್ಲಿ ಎರಡನೇ ಭಾರಿ ಈ ರೀತಿ ಅವಘಡ ಸಂಭವಿಸುತ್ತಿದೆ. ಒಂದು ವೇಳೆ ಅಣು ತ್ಯಾಜ್ಯ ತುಂಬಿದ ಕಂಟೇನರ್ ಈ ರೀತಿ ಅವಘಡದಲ್ಲಿ ಬಿದ್ದರೇ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸಾಗಾಟ ಮಾಡುವ ವೇಳೆ ಇನ್ನು ಹೆಚ್ಚಿನ ಭದ್ರತೆಯೊಂದಿಗೆ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಜಾಗರೂಕತೆ ವಹಿಸಬೇಕು ಎಂದು ಆಗ್ರಹಿಸಿದರು.