Home Local ಕುಮಟಾ ಉತ್ಸವಕ್ಕೆ ಕ್ಷಣಗಣನೆ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗಣ್ಯರು.

ಕುಮಟಾ ಉತ್ಸವಕ್ಕೆ ಕ್ಷಣಗಣನೆ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗಣ್ಯರು.

SHARE

ಕುಮಟಾ: ದಿನಾಂಕ 01-02-2018 ರಿಂದ 05-02-2018 ರ ವರೆಗೆ ನಡೆಯುವ 6 ನೇ ವರ್ಷದ “ಕುಮಟಾ ಉತ್ಸವ”ದ ಮಾಹಿತಿ ನೀಡಲು, ‘ವೈಭವ ಪ್ಯಾಲೇಸ್’ ನಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಈ ಬಾರಿಯ ಕುಮಟಾ ಉತ್ಸವವನ್ನು ಬಾರಿ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಕುಮಾರಿ ಆಧ್ಯ ಮತ್ತು ಚಂದನ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ರವಿಕುಮಾರ ಶೆಟ್ಟಿ ತಿಳಿಸಿದರು.

ಈ ಬಾರಿಯ ಪ್ರಮುಖ ಆಕರ್ಷಣೆ ನಗೆ ಹಬ್ಬ ಮತ್ತು ಡ್ಯಾನ್ಸ್ ಧಮಾಕಾದ ಬಗ್ಗೆ ಮಾಹಿತಿ ನೀಡಿದ ಇವರು ಕಾರ್ಯಕ್ರಮಕ್ಕೆ‌ಆಗಮಿಸಿ ಕಾರ್ಯಕ್ರಮ‌ಯಶಸ್ವಿಗೊಳಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಯೋಗೀಶ ಕಾಮತ್,ಗಣಪತಿ ಶೆಟ್ಟಿ, ಕೃಷ್ಣಾನಂದ ವರ್ಣೇಕರ ಇನ್ನಿತರರು ಹಾಜರಿದ್ದರು.