Home Local ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರದೀಪ ನಾಯಕ ಫಿಕ್ಸ!

ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರದೀಪ ನಾಯಕ ಫಿಕ್ಸ!

SHARE

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಿ.ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಕುಮಟಾ ಗಿಬ್ ಸರ್ಕಲ್‌ ಬಳಿ ನೂತನ ಜೆಡಿಎಸ್ ಕಛೇರಿ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕರ್ತರಿಂದ ‌ಬೆಳೆದ ಪಕ್ಷ ಜೆಡಿಎಸ್ ಹೀಗಾಗಿ ನಾಯಕರು ಪಕ್ಷ ಬಿಟ್ಟರೂ ಯಾವುದೇ ಹಾನಿ ಪಕ್ಷಕ್ಕೆ ಆಗಲಾರದು ಎಂದು ತಿಳಿಸಿದ ಅವರು ಭಟ್ಕಳ ಕ್ಷೇತ್ರಕ್ಕೆ ಇನಾಯತುಲ್ಲಾ ಶಾಭಂದ್ರಿ,ಕಾರವಾರಕ್ಕೆ ಅಸ್ನೋಟಿಕರ್,ಯಲ್ಲಾಪುರಕ್ಕೆ ರವೀಂದ್ರ ನಾಯಕ ಅವರನ್ನು ಹಾಗೂ ಶಿರಸಿಗೆ ಶಶಿಭೂಷಣ ಹೆಗಡೆಯವರನ್ನು ಗುರ್ತಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಪ್ರದೀಪ ನಾಯಕ, ಬಿ ಆರ್ ನಾಯ್ಕ, ಗಜು ನಾಯ್ಕ, ಗಣಪಯ್ಯ ಗೌಡ,ಗೀತಾ ಮುಕ್ರಿ, ಜಿ.ಜಿ ಹೆಗಡೆ, ಸಿ.ಜಿ ಹೆಗಡೆ, ಮಂಜುನಾಥ ಪಟಗಾರ ಇನ್ನಿತರರು ಹಾಜರಿದ್ದರು.