Home Local ರೋಟರಿಯಿಂದ ಪುಸ್ತಕ ದೇಣಿಗೆ

ರೋಟರಿಯಿಂದ ಪುಸ್ತಕ ದೇಣಿಗೆ

SHARE

ಕುಮಟಾ: ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್, ಮಣಿಪಾಲ ವಿಶ್ವವಿದ್ಯಾನಿಲಯದ ರೀಜನಲ್ ಡೆವಲಪ್‍ಮೆಂಟ್ ಕೇಂದ್ರದವರು ಮಣಿಪಾಲ ಟೌನ್, ಉಡುಪಿ ಮಣಿಪಾಲ್ ರೋಟರಿ ಕ್ಲಬ್ ಹಾಗೂ ಕುಮಟಾ ರೋಟರಿ ಕ್ಲಬ್ ಸಹಯೋಗದಲ್ಲಿ ಇಲ್ಲಿಯ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ 3 ಲಕ್ಷ ರೂಪಾಯಿಗಳ ವಾಣಿಜ್ಯ ಹಾಗೂ ಮ್ಯಾನೇಜ್‍ಮೆಂಟ್ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ದೇಣಿಗೆಯಾಗಿ ನೀಡಿದರು.

ಪ್ರಾರಂಭದಲ್ಲಿ ಎಸ್.ಒ.ಎಂ.ನ ನಿರ್ದೇಶಕ ಡಾ. ರವೀಂದ್ರನಾಥ ನಾಯಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಣಿಪಾಲದಂತೆ ಕುಮಟಾವೂ ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಅಭ್ಯುದಯ ಹೊಂದಬೇಕೆಂದು ಆಶಿಸಿದರು. ಮಣಿಪಾಲ ಟೌನ್ ರೋಟರಿ ಅಧ್ಯಕ್ಷ ಸಚ್ಚಿದಾನಂದ ನಾಯಕ ಕುಮಟಾ ರೋಟರಿ ಅಧ್ಯಕ್ಷ ಜಿ.ಜೆ.ನಾಯ್ಕ ಮೂಲಕ ಕಾಲೇಜು ಪ್ರಾಚಾರ್ಯ ವಿ.ಎಂ.ಪೈ ಅವರಿಗೆ ಸಾಂಕೇತಿಕವಾಗಿ ಪುಸ್ತಕಗಳನ್ನು ಹಸ್ತಾಂತರಿಸಿದರು. ಪುಸ್ತಕ ಸ್ವೀಕರಿಸಿದ ಪ್ರಾಚಾರ್ಯರು ಪ್ರತಿವರ್ಷ ತಾವು ಪಡೆಯುತ್ತಿರುವ ಪಠ್ಯಗ್ರಂಥಗಳು ತಮ್ಮೆಲ್ಲ ವಿದ್ಯಾರ್ಥಿಗಳಿಗೆ ಮತ್ತು ಇತರ ಹತ್ತಿರದ ಕಾಲೇಜಿನ ವಿದ್ಯಾರ್ಥಿಗಳಿಗೂ ಸದುಪಯೋಗವಾಗುವಂತೆ ವಿಸ್ತರಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಅಸಿಸ್ಟಂಟ್ ಗರ್ವನರ್ ಜಯಶ್ರೀ ಕಾಮತ, ಕಾರ್ಯದರ್ಶಿ ಎನ್.ಆರ್.ಗಜು, ಮಣಿಪಾಲ ಟೌನ್ ರೋಟರಿ ಸದಸ್ಯರಾದ ಕೆ. ಜೈವಿಠ್ಠಲ, ನಿತ್ಯಾನಂದ ಪಡ್ರೆ, ಮಧುಕರ ನಾಯಕ, ಮಿಥುನ್ ಶೆಟ್ಟಿ, ಸಿ.ಎಫ್.ರೋಡ್ರಗೀಸ್, ಪಿ.ಯು.ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಜಿ.ಹೆಗಡೆ, ಡಾ. ಎಸ್.ವಿ.ಶೇಣ್ವಿ, ಡಾ.ರಾಗಿಣಿ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.