Home Local ಸಾಧನಾ ಯುವಕಸಂಘದ ಸಂಯೋಜನೆಯಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ

ಸಾಧನಾ ಯುವಕಸಂಘದ ಸಂಯೋಜನೆಯಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ

SHARE

ಕುಮಟಾ: ಸಾಧನಾ ಯುವಕ ಸಂಘ(ರಿ) ಬಗ್ಗೋಣ, ಕುಮಟಾ. ಇವರ ಆಶ್ರಯದಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಮುಖಂಡರು ಮತ್ತು ಚಲನಚಿತ್ರ ನಿರ್ಮಾಪಕರಾದ ಶ್ರೀ ಸುಬ್ರಾಯ ವಾಳ್ಕೆ ದೀಪ ಬೆಳಗುವ ಮೂಲಕ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ನೇಹಿತನೊಬ್ಬನ ನೆನಪಿಗಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾವನಾತ್ಮಕ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ನಾರಾಜ ನಾಯಕ ತೊರ್ಕೆ, ಮಾಜಿ ಶಾಸಕ ದಿನಕರ ಶೆಟ್ಟಿ, ವಾಲಿಬಾಲ್ ಆಟಗಾರ ರಮೇಶ ಪ್ರಭು ಹಾಗೂ ಕ್ರೀಡಾಪಟುಗಳು ಮತ್ತು ಊರಿನ ನಾಗರೀಕರು ಹಾಜರಿದ್ದರು.