Home Local ಮಡಿವಾಳ ಸಮಾಜದ ವಾರ್ಷಿಕೋತ್ಸವ ಸಂಪನ್ನ.

ಮಡಿವಾಳ ಸಮಾಜದ ವಾರ್ಷಿಕೋತ್ಸವ ಸಂಪನ್ನ.

SHARE

ಕುಮಟಾ : ತಾಲೂಕು ಮಡಿವಾಳ ಸಮಾಜದ ಸಂಘಟನೆಗಳ ವಾರ್ಷಿಕೋತ್ಸವ ಶ್ರೀ ಮಹಾಸತಿ ಸಭಾ ಭವನ ಕುಮಟಾದಲ್ಲಿ ನಡೆಯಿತು.

ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ನೆಚ್ಚಿನ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು.

ನಂತರ ಮಡಿವಾಳ ಸಮಾಜದಲ್ಲಿ ಸಾಧನೆಮಾಡಿದ ಪ್ರತಿಭಾವಂತರನ್ನು ಪುರಸ್ಕಾರಿಸಲಾಯಿತು. ವಿವಿಧ ಉನ್ನತ ಹುದ್ದೆಯ ನೌಕರರಿಗೆ ಸನ್ಮಾನ ನಡೆಸಿ ಗೌರವಿಸಲಾಯಿತು.

ನಂತರ ಮಾತನಾಡಿದ ಶ್ರೀಮತಿ ಶಾರದಾ ಶೆಟ್ಟಿ ಮಡಿವಾಳ ಸಮಾಜದವರು ಶ್ರಮಜೀವಿಗಳು, ಶಿಕ್ಷಣದ ಮೂಲಕ ಅವರು ಮುಂದುವರಿಯಬೇಕು ಎಂದರು.

ಮಡಿವಾಳ ಸಮಾಜದ ಪ್ರಮುಖರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.