Home Local ಶಿರಸಿ : ಶಾಸನ ಸಭೆಗಳಲ್ಲಿ ಕಳಂಕಿತರು ಹೆಚ್ಚಾಗುತ್ತಿದ್ದಾರೆ ; ಬಸವರಾಜ ಹೊರಟ್ಟಿ

ಶಿರಸಿ : ಶಾಸನ ಸಭೆಗಳಲ್ಲಿ ಕಳಂಕಿತರು ಹೆಚ್ಚಾಗುತ್ತಿದ್ದಾರೆ ; ಬಸವರಾಜ ಹೊರಟ್ಟಿ

SHARE

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಲಾಗಿದ್ದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಹೊರಟ್ಟಿಯವರು ಮಾತನಾಡಿದರು. ಶಾಸನ ಸ್ಥಾನಕ್ಕಿರುವ ಘನತೆಯನ್ನೂ ಮೀರಿ ವರ್ತಿಸುವವರು ಹೆಚ್ಚಾಗುತ್ತಿರುವ ದಿನಗಳಲ್ಲಿ ಡಾ. ಶಶಿಭೂಷಣ ಹೆಗಡೆಯವರಂತ ಸುಸಂಸ್ಕೃತರನ್ನು ಆರಿಸಿ ಕಳುಹಿಸಬೇಕು.

ಶಶಿಭೂಷಣ ಹೆಗಡೆ ಉತ್ತಮ ಕುಟುಂಬದಿಂದ ಬಂದವರು. ಅವರನ್ನು ಮತದಾರರು ಶಾಸನ ಸಭೆಗೆ ಆರಿಸಿ ಕಳುಹಿಸಬೇಕು. ಅವರಿಂದ ರಾಜ್ಯದಲ್ಲಿ ಶಿರಸಿ-ಸಿದ್ದಾಪುರ ಮತಕ್ಷೇತ್ರ ಪ್ರಸಿದ್ಧಿ ಪಡೆಯುವುದರಲ್ಲಿ ಯಾವದೇ ಅನುಮಾನವಿಲ್ಲ ಎಂದರು.

ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಆಡಳಿತ ನೀಡಿದೆ. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ ಜನರ ಮೇಲೆ 36 ಸಾವಿರ ರೂ.ಗಳಷ್ಟು ಸಾಲದ ಹೊರೆಯ ಸಾಲಭಾಗ್ಯ ನೀಡಿದ್ದಾರೆ. ಒಟ್ಟಾರೆ ಅವರ ಆಡಳಿತ ಅವಧಿಯಲ್ಲಿ ರಾಜ್ಯ ಸರ್ಕಾರ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲವನ್ನು ಮಾಡಿದೆ ಎಂದು ಟೀಕಿಸಿದರು.