Home Local `ಗೋಮೂತ್ರದಿಂದ ಅನಂತಕುಮಾರ ಹೆಗಡೆಯನ್ನು ಶುದ್ಧಗೊಳಿಸಬೇಕು’ : ಮಧು ಬಂಗಾರಪ್ಪ

`ಗೋಮೂತ್ರದಿಂದ ಅನಂತಕುಮಾರ ಹೆಗಡೆಯನ್ನು ಶುದ್ಧಗೊಳಿಸಬೇಕು’ : ಮಧು ಬಂಗಾರಪ್ಪ

SHARE

ಜೆಡಿಎಸ್‌ ರೋಡ್‌ ಶೋ ಹಾಗೂ ಬೈಕ್‌ ರ್ಯಾಲಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಧು ಬಂಗಾರಪ್ಪ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಧರ್ಮವನ್ನು ಬೀದಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸಿದರೆ, ಕಾಂಗ್ರೆಸ್‌ ಅದಕ್ಕೆ ಸೀಮೆಎಣ್ಣೆ ಸುರಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂಸತ್‌ನಲ್ಲಿ ಈಗಾಗಲೇ ಕ್ಷಮೆ ಕೇಳಿದ್ದಾರೆ, ಆದರೂ ಅವರು ಬದಲಾಗಿಲ್ಲ.

ಈಗ ಬುದ್ಧಿಜೀವಿಗಳ, ಚಿಂತಕರ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಬೆಂಕಿ ಹಚ್ಚಲು ಮಂತ್ರಿಯಾಗಿದ್ದೀರಾ. ಸಚಿವರಾಗಿ ಹೆಗಡೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಒಂದು ಧರ್ಮದ ಮತ ನನಗೆ ಬೇಡ ಎಂದು ಒಂದು ಸಮುದಾಯವನ್ನು ದ್ವೇಷಿಸುವ ಕೆಲಸ ಕೇಂದ್ರ ಸಚಿವರು ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿಯ ಅಮಾಯಕ ಯುವಕರು ಶಿಕ್ಷೆ ಅನುಭವಿಸುವಂತಾಯಿತು. ಕರಾವಳಿಯ ಶಾಂತಿ ಕದಡಿ ಹೋಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.