Home Local ಯುವ ಜನತೆಯಲ್ಲಿ ಅಡಗಿರುವ ಅದ್ಭುತವಾದ ಶಕ್ತಿ ಸರಿಯಾದ ದಿಶೆಯಲ್ಲಿ ಸಾಗಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ

ಯುವ ಜನತೆಯಲ್ಲಿ ಅಡಗಿರುವ ಅದ್ಭುತವಾದ ಶಕ್ತಿ ಸರಿಯಾದ ದಿಶೆಯಲ್ಲಿ ಸಾಗಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ

SHARE

ಸಾರ್ಥ ಪ್ರತಿಷ್ಠಾನ ಕುಮಟಾ ಇವರ ಆಶ್ರಯದಲ್ಲಿ ಕುಮಟಾದ ಹವ್ಯಕ ಸಭಾಭವನದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆ ಅವರು ಉದ್ಘಾಟಿಸಿ ಮಾತನಾಡಿದ ಅವರು ಸಾರ್ಥ ಪ್ರತಿಷ್ಠಾನವು ಕಳೆದ ಹಲವಾರು ವರ್ಷಗಳಿಂದ ಶಿಕ್ಷಣಕ್ಕೆ ಪ್ರೋತ್ಶಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿದ್ದು ಪ್ರಸ್ತುತ ಸುಮಾರು 75 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಪ್ರತಿಯೊಬ್ಬರಲ್ಲೂಒಂದಲ್ಲಒಂದುರೀತಿಯ ಪ್ರತಿಭೆ, ಸಾಮಥ್ರ್ಯಅಡಗಿರುತ್ತದೆ. ಕೇವಲ ಅಂಕ ಗಳಿಸುವುದೊಂದೇ ವಿದ್ಯಾರ್ಥಿಯಧ್ಯೇಯವಾಗಿರದೇ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿ ಪರಿಪೂರ್ಣರಾಗಬೇಕು. ಉತ್ತಮ ಅಂಕ ಗಳಿಸಿ ತಂದೆತಾಯಿ, ಕಲಿತ ಶಾಲೆ ಮತ್ತುಊರಿಗೆಕೀರ್ತಿತರುವಂತಾಗಬೇಕು. ನಮ್ಮನ್ನು ಬೆಳೆಸಿದ ಸಮಾಜಕ್ಕೆತಿರುಗಿಕಿಂಚಿತ್ತಾದರೂ ಸೇವೆ ನೀಡುವ ಮನೋಭಾವನೆಯೊಂದಿಗೆಉತ್ತಮ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.ಮುಂದೆ ಏನಾಗಬೇಕು ಎನ್ನುವುದನ್ನು ನೀವೇ ನಿರ್ಧರಿಸಬೇಕು. ಆ ದಿಶೆಯಲ್ಲಿಕಠಿಣ ಶ್ರಮ ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿತಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಕಳೆದು ಹೋದ ಸಮಯ ಮತ್ತೆ ಹಿಂತಿರುಗಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ ಡಾ|| ರೇವತಿಆರ್. ನಾಯ್ಕಅವರುಎಲ್ಲಾ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದಅಧ್ಯಕ್ಷರಾದ ಗೋಪಾಲಕೃಷ್ಣ ಉಗ್ರು, ಕಾರ್ಯದರ್ಶಿ ಎಸ್. ಎನ್. ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.