Home Local ಕಾಗಾಲದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ: ಸ್ಥಳ ದಾನಿಗಳನ್ನು ಸ್ಮರಿಸಿದ ಶಾಸಕರು.

ಕಾಗಾಲದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ: ಸ್ಥಳ ದಾನಿಗಳನ್ನು ಸ್ಮರಿಸಿದ ಶಾಸಕರು.

SHARE

ಕುಮಟಾ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ
ಶಿಶು ಅಭಿವೃದ್ಧಿ ಯೋಜನೆಯಡಿ ಕುಮಟಾ ತಾಲೂಕಿನ
ಕಾಗಲ ಪಂಚಾಯತ ವ್ಯಾಪ್ತಿಯ ಗೌಡರಕೇರಿಯಲ್ಲಿ ನಿರ್ಮಾಣಗೊಂಡ ಅಂದಾಜು 9.17 ಲಕ್ಷ ರೂಪಾಯಿಗಳ ಅಂಗನವಾಡಿ ಕಟ್ಟಡವನ್ನು ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಉದ್ಘಾಟಿಸಿದರು.

ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ ಈ ಸಂದರ್ಭದಲ್ಲಿ ಕಟ್ಟಡಕ್ಕೆ ಸ್ಥಳ ದಾನ ಮಾಡಿದ ದಿ! ಗೋಯ್ದು ಗೌಡ ಇವರನ್ನು ಸ್ಮರಿಸಿದರು.

ವೇದಿಕೆಯಲ್ಲಿ ಜಿ. ಪಂ ಸದಸ್ಯರಾದ ಶ್ರೀ ರತ್ನಾಕರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿ, ಎಲ್, ನಾಯ್ಕ ಲಲಿತಾ ಪಟಗಾರ,ತ್ರಿವೇಣಿ ಯಾಜಿ,ಚಂದ್ರಕಲಾ ನಾಯ್ಕ,ವೀಣಾ ನಾಯ್ಕ,ಹನುಮಂತ ಪಟಗಾರ,ಎಂ.ಟಿ. ನಾಯ್ಕ,ಶಶಿಕಾಂತ ನಾಯ್ಕ,ರತ್ನಾಕರ್ ನಾಯ್ಕ,ಹಾಗೂ ಊರ ನಾಗರೀಕರು ಹಾಜರಿದ್ದರು.