Home Local ಹಿಂದೂಗಳ ಉತ್ಸವದ ಸಮಯದಲ್ಲಿ ರೈಲಿನ ಮತ್ತು ಬಸ್ಸಿನ ಬಾಡಿಗೆಯನ್ನು ಏರಿಸುವುದನ್ನು ರದ್ದುಪಡಿಸಬೇಕು !

ಹಿಂದೂಗಳ ಉತ್ಸವದ ಸಮಯದಲ್ಲಿ ರೈಲಿನ ಮತ್ತು ಬಸ್ಸಿನ ಬಾಡಿಗೆಯನ್ನು ಏರಿಸುವುದನ್ನು ರದ್ದುಪಡಿಸಬೇಕು !

SHARE

ಹೊನ್ನಾವರ – ಅನಿಯಂತ್ರಿತ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ದೇಶದಲ್ಲಿ ಲಭ್ಯವಿರುವ ಸಕಲ ಸೌಲಭ್ಯ, ಅಭಿವೃದ್ಧಿ ಮೌಲ್ಯ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಮುಂಬರುವ ಕಾಲದಲ್ಲಿ ಈ ಹೆಚ್ಚುತ್ತಿರುವ ಜನಸಂಖ್ಯೆಯನ್ನು ತಡೆಗಟ್ಟದೇ ಇದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಹಾಗೂ ಭಾರತದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆಯುಂಟಾಗಬಹುದು. ಇದನ್ನು ತಪ್ಪಿಸಲು ಎಲ್ಲಾ ನಾಗರೀಕರಿಗೆ ಜನಸಂಖ್ಯೆ ನಿಯಂತ್ರಣ ಹಾಗೂ ಸಮತೋಲನೆಗಾಗಿ ಅತೀ ಶೀಘ್ರವಾಗಿ ಕಾನೂನನ್ನು ಜಾರಿಗೆ ತರಬೇಕು. ಅದರೊಂದಿಗೆ, ಉತ್ತರಕಾಶಿ, ಹರಿದ್ವಾರ, ಪುಷ್ಕರಾಲೂ(ತೆಲಂಗಣ) ಇತ್ಯಾದಿ ವಿವಿಧ ಪವಿತ್ರ ಕ್ಷೇತ್ರದಲ್ಲಿ “ಮಾಘ ಮೇಳಾ” ಈ ಧಾರ್ಮಿಕ ಉತ್ಸವ ನಡೆಯುತ್ತದೆ. ಈ ನಿಮಿತ್ತವಾಗಿಯೇ ಲಕ್ಷಗಟ್ಟಲೆ ಭಕ್ತಾದಿಗಳು ಪವಿತ್ರ ಸ್ನಾನವನ್ನು ಮಾಡಲು ಯಾತ್ರೆಯನ್ನು ಮಾಡುತ್ತಾರೆ. ಈ ಸಮಯದಲ್ಲಿ ರೈಲು ಹಾಗೂ ಸಾರಿಗೆ ಸಂಪರ್ಕ ಮಂಡಳಿಯ ಬಾಡಿಗೆಯನ್ನು ಹೆಚ್ಚಿಸಲಾಗುತ್ತದೆ. ಇದು ಕೇವಲ ಹಿಂದೂಗಳ ಧಾರ್ಮಿಕ ಉತ್ಸವದ ಸಮಯದಲ್ಲಿ ಮಾತ್ರ ಬಾಡಿಗೆಯನ್ನು ಹೆಚ್ಚಿಸುವಂತಹ ಅನ್ಯಾಯಯುತವಾದ ಧಾರ್ಮಿಕ ಬೇಧ-ಭಾವವಾಗಿದೆ; ಆದ್ದರಿಂದ ಇದನ್ನು ಅತಿ ಶೀಘ್ರದಲ್ಲೇ ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು “ರಾಷ್ಟ್ರೀಯ ಹಿಂದೂ ಆಂದೋಲನ”ದ ಮಾಧ್ಯಮದಿಂದ ಇಡಲಾಯಿತು. ಈ ಆಂದೋಲನವನ್ನು ಜನವರಿ 23 ರಂದು ಹೊನ್ನಾವರದ ತಹಶೀಲದಾರರ ಕಚೇರಿಯಲಿ ಆಂದೋಲನವನ್ನು ಮಾಡಲಾಯಿತು.

ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಎಲ್ಲಾ ಧರ್ಮದವರಿಗೆ ಒಂದೇ ರೀತಿಯ ಕಾನೂನು ಇಲ್ಲದ್ದರಿಂದ ಅಲ್ಪಸಂಖ್ಯಾತರ ಜನಸಂಖ್ಯೆಯು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.. ಸಧ್ಯದಲ್ಲಿ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ ಹಾಗೂ ಮಣಿಪುರ ಈ ರಾಜ್ಯಗಳಲ್ಲಿ ಹಾಗೂ ಲಕ್ಷದ್ವೀಪ ಹಾಗೂ ನಿಕೊಬಾರ್ ಈ ಕೇಂದ್ರಾಡಳಿತವಿರುವ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ದೇಶದಲ್ಲಿ 5 ಕೋಟಿ ಬಾಂಗ್ಲಾದೇಶಿ ನುಸುಳುಖೋರರು, 40 ಸಾವಿರ ರೊಹಿಂಗ್ಯಾ ಮುಸಲ್ಮಾನ ನುಸುಳು ಖೋರರು ಹಾಗೂ ಪಾಸ್‍ಪೋರ್ಟ್‍ನ ಅವಧಿಯು ಮುಗಿದನಂತರವೂ ಹೋಗದೇ ಇರುವ ಸಾವಿರಾರು ಪಾಕಿಸ್ತಾನಿ ನಾಗರೀಕರಿಂದಾಗಿ ಭಾರತದ ಆಂತರಿಕ ವ್ಯವಸ್ಥೆಗೆ ಭಾರವಾಗಿದೆ. ಇದನ್ನು ತಡೆಯದೇ ಇದ್ದರೆ, 2030 ವರ್ಷದ ಮೊದಲೇ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರು, ಎಂಬ ಅಭಿಪ್ರಾಯವನ್ನು ಅನೇಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಹೇಳಿವೆ. ಆದ್ದರಿಂದ ಈ ಸಮಯದಲಿ ಜನಸಂಖ್ಯೆ ನಿಯಂತ್ರಣ ಮತ್ತು ಸಮತೋಲನವನ್ನು ಕಾಪಾಡಲು ಕಾನೂನನ್ನು ಜಾರಿಗೆ ತರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ದೇವಿದಾಸ ಮಡಿವಾಳ ಇವರು ಬೇಡಿಕೆಯನ್ನು ಇಟ್ಟಿದ್ದಾರೆ.

ಸದ್ಯದಲ್ಲೆ ಹಿಂದೂಗಳ ಮಾಘ ಮೇಳದ ನಿಮಿತ್ತ ಉತ್ತರಪ್ರದೇಶದ ಸರಕಾರ ಹಾಗೂ ತೆಲಂಗಾಣ ಸರಕಾರವು ಒಂದುಕಡೆ ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಉಪಯೋಗಿಸುವವರಿಗೆ ಹೆಚ್ಚುವರಿ ಬಾಡಿಗೆಯನ್ನು ವಸೂಲು ಮಾಡುವ ನಿರ್ಣಯವನ್ನು ತೆಗೆದುಕೊಂಡರೆ ಇನ್ನೊಂದು ಕಡೆ ಹಜ್ ಯಾತ್ರೆಗಾಗಿ ಮುಸಲ್ಮಾನರಿಗೆ ನೂರಾರು ಕೋಟಿ ಹಣವನ್ನು ಪೂರೈಸಿ ಕಡಿಮೆ ಖರ್ಚಿನಲ್ಲಿ ವಿಮಾನದ ಮೂಲಕ ಯಾತ್ರೆಯ ಸೌಕರ್ಯವನ್ನು ಒದಗಿಸುತ್ತಿದೆ. ಇದು ಒಂದು ಧಾರ್ಮಿಕ ಬೇಧಭಾವ ವಾಗಿದೆ ಹಾಗೂ ಜಾತ್ಯಾತೀತವೆಂದು ಹೇಳಿಕೊಳ್ಳುವ ಪ್ರಜಾಪ್ರಭುತ್ವದ “ಎಲ್ಲಾ ಧರ್ಮದವರಿಗೆ ಸಮಾನ ನ್ಯಾಯ ಸಿಗಬೇಕು” ಎಂಬ ಸಿದ್ಧಾಂತದ ಮೇಲೆ ಆಘಾತ ಮಾಡುವಂತಿದೆ, ಎಂಬ ವಿಚಾರವನ್ನು ಈ ಸಮಯದಲ್ಲಿ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಮಾಡಿದಂತಹ ಇತರ ಬೇಡಿಕೆಗಳು…
1. 27 ವರ್ಷಗಳಿಂದ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಆಗಿಲ್ಲ, ಆದರೆ ಬಾಂಗ್ಲಾದೇಶೀ ಮತ್ತು ರೋಹಿಂಗ್ಯಾ ಮುಸಲ್ಮಾನರಿಗೆ ಎಲ್ಲಾ ರೀತಿಯ ಸೌಕರ್ಯಗಳು ಸಿಗುತ್ತಿವೆ, ಆದ್ದರಿಂದ ಕೇಂದ್ರ ಸರಕಾರವು ಕಶ್ಮೀರಿ ಹಿಂದೂಗಳಿಗೆ ಕೂಡಲೇ ಪುನರ್ವಸತಿ ಕಲ್ಪಿಸಬೇಕು ಹಾಗೂ ಅವರಿಗೆ ಸ್ವತಂತ್ರವಾದ “ಹೋಮಲ್ಯಾಂಡ್” ಅನ್ನು ನೀಡಬೇಕು.

2. ಬಿಹಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಯುವಕರಿಗೆ ಉದ್ಯೋಗವನ್ನು ನೀಡಲು ಶೇ5 ರಷ್ಟು ಬಡ್ಡಿಯ ದರದಂತೆ 1 ರಿಂದ 5 ಲಕ್ಷದ ವರೆಗೆ ಧನ ಸಹಾಯ ಮಾಡುವ ಯೋಜನೆಯನ್ನು ರೂಪಿಸಿದೆ. ಅದಕ್ಕಾಗಿ ನೂರುಕೋಟಿಯಷ್ಟು ಹಣದ ವ್ಯವಸ್ಥೆಯನ್ನೂ ಮಾಡಿದೆ. ಸರಕಾರಕ್ಕೆ ಸಿಗುವಂತಹ ವಿವಿಧ ಪ್ರಕಾರದ ತೆರಿಗೆಯಲ್ಲಿ ಹೆಚ್ಚಿನ ತೆರಿಗೆಯ ಹಣವು ಬಹುಸಂಖ್ಯಾತ ಹಿಂದುಗಳದ್ದೇ ಇದೆ. ಈ ಹಣದಿಂದ ಮುಸಲ್ಮಾನರಿಗೆ ಲಾಭವನ್ನು ಕೊಡುವುದು ಇದು ಒಂದುರೀತಿಯ ಹಿಂದೂಗಳ ಮೇಲೆ ಅನ್ಯಾಯವೇ ಆಗಿದೆ. ಇದು ಸಂವಿಧಾನ ಮತ್ತು ಸಮಾನತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ, ಆದ್ದರಿಂದ ಈ ಯೋಜನೆಯನ್ನು ರದ್ದುಗೊಳಿಸಿ ಎಲ್ಲಾ ಸಮಾಜಕ್ಕೆ ಸಮಾನವಾದ ಯೋಜನೆಯನ್ನು ನಿರ್ಮಿಸಬೇಕು ಎಂದು ಮನವಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಜಿ.ಟಿ. ಭಟ್, ರತ್ನಾಕರ ಶೇಟ, ಬಾಲಕೃಷ್ಣ ಬಾಳೇರಿ, ಅಶೋಕ ನಾಯ್ಕ, ಸದಾಶಿವ ಭಟ್, ಸೌ.ಕಲ್ಪನಾ ನಾಯ್ಕ, ಸೌ.ವಾಸಂತಿ ಮುರ್ಡೇಶ್ವರ ಮುಂತಾದವರು ಉಪಸ್ಥಿತರಿದ್ದರು.