Home Local “ಗೋಕರ್ಣ ಗೌರವ” 381ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಬಸಯ್ಯಸ್ವಾಮಿಗಳು

“ಗೋಕರ್ಣ ಗೌರವ” 381ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಬಸಯ್ಯಸ್ವಾಮಿಗಳು

SHARE

ಗೋಕರ್ಣ : ಪ ಪೂ ಶ್ರೋ. ಬ್ರ. ನಿ. ಬಸಯ್ಯಸ್ವಾಮಿಗಳು, ನಿಜಗುಣ ಸಿದ್ಧಾಶ್ರಮ, ಜಮಖಂಡಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 381ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ತಮಿಳುನಾಡಿನ ಈರೋಡದ ವೈದ್ಯರಾದ ಡಾ. ಚಿದಂಬರಂ ಹಾಗೂ ಡಾ. ಮಲ್ಲಿಕಾ ದಂಪತಿಗಳು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು . ವೇ ವಿಶ್ವನಾಥ ಭಟ್ ಬಾಳೆಹಿತ್ಲು ಇವರು ಪೂಜಾ ಕೈಂಕರ್ಯ ನೆರವೇರಿಸಿದರು.