Home Local ಶ್ರೀ ಶ್ರೀ ಆತ್ಮಾನಂದ ಸ್ವಾಮಿಗಳಿಗೆ ‘ಗೋಕರ್ಣ ಗೌರವ’

ಶ್ರೀ ಶ್ರೀ ಆತ್ಮಾನಂದ ಸ್ವಾಮಿಗಳಿಗೆ ‘ಗೋಕರ್ಣ ಗೌರವ’

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ಆತ್ಮಾನಂದ ಸ್ವಾಮಿಗಳು , ಸಿದ್ಧಾರೂಢಮಠ, ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 382ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಬೆಳಗಾವಿಯ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ಸ್ವಾಮಿ ಸತ್ವಸ್ಥಾನಂದರು ಶ್ರೀ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು . ವೇ ವಿಶ್ವನಾಥ ಭಟ್ ಬಾಳೆಹಿತ್ಲು ಇವರು ಪೂಜಾ ಕೈಂಕರ್ಯ ನೆರವೇರಿಸಿದರು.