Home Local ಉಪ್ಪಾರ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಕೇಳಿಬಂತು ಆಗ್ರಹ: ಕಾರವಾರದಲ್ಲಿ ನಡೆಯಿತು ಪ್ರತಿಭಟನೆ.

ಉಪ್ಪಾರ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಕೇಳಿಬಂತು ಆಗ್ರಹ: ಕಾರವಾರದಲ್ಲಿ ನಡೆಯಿತು ಪ್ರತಿಭಟನೆ.

SHARE

ಕಾರವಾರ:ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಸಮಾಜದವರು ನಡೆಸಿದ ಹೋರಾಟ ಹಾಗೂ ಬಲಿದಾನವನ್ನು ಸ್ವಾತಂತ್ರ್ಯ ನಂತರ ಬಂದ ಸರಕಾರಗಳು ಮರೆತಿವೆ. ಉಪ್ಪಾರ ಸಮಾಜ ಮೊದಲಿನಿಂದಲೂ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದು, ಗಾರೆ, ಗೋಡೆ ಕಟ್ಟುವುದು, ಕೂಲಿ, ಕಲ್ಲು ಒಡೆಯುವ ಕೆಲಸಗಳನ್ನು ಮಾಡುತ್ತ ಜೀವನ ನಡೆಸುತ್ತಿದೆ. ಆದರೆ ಇದೇ ಉದ್ಯೋಗವನ್ನು ಮಾಡುವ ವಡ್ಡರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಉಪ್ಪಾರ ಸಮಾಜದವರನ್ನು ಮಾತ್ರ ಹೊರಗಿಟ್ಟಿದ್ದಾರೆ. ಈ ಬಗ್ಗೆ ಉಪ್ಪಾರ ಮುಖಂಂಡರು ಸರಕಾರಕ್ಕೆ ಸಾಕಷ್ಟು ಬಾರಿ ಮನವಿಯಲ್ಲಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಸರಕಾರ ಕೂಡ ಈಗಾಗಲೇ ಸಮಾಜ ಸ್ಥಿತಿಗತಿ ಅರೆಯಲು ರಚನೆಯಾಗ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ, ಹಾವನೂರು ಆಯೋಗಗಳು ಸಮಾಜ ಹಿಂದೂಳಿದಿರುವ ಬಗ್ಗೆ ವರದಿ ನೀಡಿವೆ. ಆದರೆ ಈವರೆಗೆ ಯಾವುದೇ ಸರಕಾರಗಳು ವರದಿಯನ್ನು ನೋಡಿ ಸಮಾಜದ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಮುರಗೋಡ, ಜಿಲ್ಲಾಧ್ಯಕ್ಷ ದೆವೇಂದ್ರ ಬಸಾಪುರ, ಮುದ್ದಣ್ಣ ಹಾಲಂಡಿ ಇನ್ನಿತರರು ಇದ್ದರು.