Home Local ಸಂಪನ್ನವಾಯ್ತು ದಿ|| ಮೋಹನ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್”ವತಿಯಿಂದ ‘ಸ್ಪೋಕನ್ ಇಂಗ್ಲಿಷ್’ ಕಾರ್ಯಾಗಾರ

ಸಂಪನ್ನವಾಯ್ತು ದಿ|| ಮೋಹನ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್”ವತಿಯಿಂದ ‘ಸ್ಪೋಕನ್ ಇಂಗ್ಲಿಷ್’ ಕಾರ್ಯಾಗಾರ

SHARE

ಕುಮಟಾ: ತಾಲೂಕಿನ ಸರಕಾರಿ ಪ್ರೌಢಶಾಲೆ ಅಘನಾಶಿನಿಯಲ್ಲಿ “ದಿ|| ಮೋಹನ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್”ವತಿಯಿಂದ ‘ಸ್ಪೋಕನ್ ಇಂಗ್ಲಿಷ್’ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭ ಇಂದು ನಡೆಯಿತು.

ಸಮಾರೋಪ ಸಮಾರಂಭವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.

ಜನಾನುರಾಗಿ ಹಾಗೂ ಮಾಜಿ ಶಾಸಕರಾದ ಮೋಹನ ಕೆ ಶೆಟ್ಟಿ ಅವರ ಜನಪರ ಕಾಳಜಿ ಹಾಗೂ ಅವರು ನೀಡಿದ ಸೇವೆಗಳ ಬಗ್ಗೆ ಮೆಲುಕು ಹಾಕಿದ ಶಾಸಕರು ಸಮಾಜ ಸೇವೆಗೆ ನಾವೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಗೆ ಟ್ರಸ್ಟ್ ವತಿಯಿಂದ ವಾಟರ್ ಫಿಲ್ಟರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ,ಶಾಲೆಯ ಮುಖ್ಯಶಿಕ್ಷಕರು,ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.