Home Local ಮೂಡಂಗಿ ರಂಗಮಂದಿರದಲ್ಲಿ “ಪ್ರಜಾರಾಜ್ಯೋತ್ಸವ ಕಾರ್ಯಕ್ರಮ”

ಮೂಡಂಗಿ ರಂಗಮಂದಿರದಲ್ಲಿ “ಪ್ರಜಾರಾಜ್ಯೋತ್ಸವ ಕಾರ್ಯಕ್ರಮ”

SHARE

ಕುಮಟಾ: ಗ್ರಾಮಾಭಿವೃದ್ಧಿ ಸಂಘ (ರಿ.) ಮೂಡಂಗಿ, ತದಡಿ, ಕುಮಟಾ ಇವರ ಆಶ್ರಯದಲ್ಲಿ ಮೂಡಂಗಿ ರಂಗಮಂದಿರದಲ್ಲಿ ನಡೆದ “ಪ್ರಜಾರಾಜ್ಯೋತ್ಸವ ಕಾರ್ಯಕ್ರಮ” ನಡೆಯಿತು.

ಕಾರ್ಯಕ್ರಮವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.

ಭಾರತಕ್ಕೆ ಗಣರಾಜ್ಯ ಬಂದ ಈ ಸಂದರ್ಭ ಅವಿಸ್ಮರಣೀಯ ಇಂತಹ ಸಮಯದಲ್ಲಿ ದೇಶ ಸೇವೆಗೆ ನಾವು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಮುಖಂಡರಾದ ಶ್ರೀ ಪ್ರದೀಪ್ ನಾಯ್ಕ, ಬಿಜೆಪಿ ಮುಖಂಡರಾದ ಶ್ರೀ ನಾಗರಾಜ ನಾಯಕ ತೊರ್ಕೆ,ಸುರೇಖಾ ವಾರೇಕರ್ ಹಾಗೂ ಮುಖಂಡರು ಹಾಜರಿದ್ದರು.