Home Local ಶಿವಪುರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.

ಶಿವಪುರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಶೆಟ್ಟಿ.

SHARE

ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪುರದಲ್ಲಿ ಅಂದಾಜು 9.17 ಲಕ್ಷ ರೂ. ಮೊತ್ತದ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶಿಕ್ಷಣ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಈ ಕಾಮಗಾರಿ ಅನುಕೂಲವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಜಿ.ಪಂಚಾಯತ ಸದಸ್ಯರಾದ ರತ್ನಾಕರ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಂಜುನಾಥ ಪಟಗಾರ,ಪಂ ಸದಸ್ಯರಾದ ಬಿ ಜಿ ಶಾನಭಾಗ ಹಾಗೂ ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ ಪ್ರಮುಖರಾದ ನಾಗವೇಣಿ ಮುಕ್ರಿ, ಶಾರದಾ ಹೆಗಡೆ,ಶಿವಾನಂದ ಪಟಗಾರ ಮತ್ತು ಆರ್ ಪಿ ಪಟಗಾರ ಹಾಜರಿದ್ದರು.