Home Local ತ್ರಿವಳಿ ತಲಾಖ್ ಕಾನೂನು ಮುಸ್ಲಿಂ ಶರಿಯತ್ ಕಾನೂನಿನ ವಿರುದ್ದವಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ : ನಬೀರಾ...

ತ್ರಿವಳಿ ತಲಾಖ್ ಕಾನೂನು ಮುಸ್ಲಿಂ ಶರಿಯತ್ ಕಾನೂನಿನ ವಿರುದ್ದವಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ : ನಬೀರಾ ಮೊಹತೆಶಾಮ್

SHARE

ಭಟ್ಕಳ: ಕೇಂದ್ರದ ಬಿಜೆಪಿ ಸರ್ಕಾರ ಮುಸ್ಲಿರ ವೈಯಕ್ತಿಕ ಕಾನೂನಿಲ್ಲಿ ತಮ್ಮ ಹಸ್ತಕ್ಷೇಪ ಮಾಡುತ್ತಿದ್ದು, ಅವರು ಜಾರಿಗೆ ತರಲು ಯತ್ನಿಸಿರುವ ತ್ರಿವಳಿ ತಲಾಖ್ ಕಾನೂನು ಮುಸ್ಲಿಂ ಶರಿಯತ್ ಕಾನೂನಿನ ವಿರುದ್ದವಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ರಬಿತಾ ಮಿಲತ್ ಕಮಿಟಿಯ ಮಹಿಳಾ ಘಟಕದ ನಬೀರಾ ಮೊಹತೆಶಾಮ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಲ್ಲಿನ ನಗರದ ರಬಿತಾ ಹಾಲಿನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.ಕೇಂದ್ರ ಸರ್ಕಾರ ಮುಸ್ಲಿಂ ಹಕ್ಕುಗಳನ್ನು ಧಮನಗೊಳಿಸುತ್ತಿದೆ. ತ್ರಿವಳಿ ತಲಾಖ್ ರದ್ದತಿಯ ಪ್ರಸ್ತಾಪ ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ಬಗ್ಗೆ ನಮ್ಮ ತೀವ್ರವಾದ ನೋವು ವಿರೋಧವಿದೆ. ಆದರೆ ರಾಜ್ಯ ಸಭೆಯಲ್ಲಿ ಈ ಕಾನೂನು ಅಂಗಿಕಾರಗೊಳ್ಳಲು ನಾವು ಬಿಡುವುದಿಲ್ಲ. ಈ ಬಗ್ಗೆ ರಾಜ್ಯ ಸಭಾ ಎಲ್ಲಾ ಸದಸ್ಯರಿಗೂ ಇಮೇಲ್ ಕಳುಹಿಸುವುದರ ಮೂಲಕ ಅಭಿಯಾನ ಆರಂಭಿಸಲಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಈ ಕುರಿತು ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿದೇವೆ.

ಒಂದು ವೇಳೆ ನಮ್ಮ ಕಾನೂನು ಬಾಹಿರವಾಗಿ ತಲಾಖ್ ನೀಡಿದ್ದರೆ ಅದನ್ನು ಖಾಜಿಗಳ ನೇತೃತ್ವದಲ್ಲಿ ಪರಿಹರಿಸಲು ಅವಕಾಶವಿದೆ. ಆದರೆ ಈ ಬಗ್ಗೆ ಕೆಲವು ಮಾದ್ಯಮಗಳು ವಿನಾಕಾರಣ ಚರ್ಚೆ ನಡೆಸಿ ಧರ್ಮದ ಕುರಿತು ಅಪಪ್ರಚಾರ ನಡೆಸುತ್ತಿದ್ದಾರೆ. ಹಾಗಿದ್ದರೆ ಮಾಧ್ಯಮಗಳು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವ ಕುರಿತು ಚರ್ಚಿಸಿ ಸಾಮಾಜಿಕ ಕಳಕಳಿ ಮೆರೆಯಲಿ. ಮುಸ್ಲಿಂ ಧರ್ಮದಲ್ಲಿ ನಡೆಯುವ ಮದುವೆ ಒಪ್ಪಂದವು ತಲಾಖ್ ಎನ್ನುವ ಪದಗಳಲ್ಲಿ ಅಂತ್ಯಗೊಳ್ಳುವದಿದ್ದರೆ ಇದರ ಪ್ರಮಾಣ ಇತರ ಧರ್ಮದವರಿಗಿಂತ ಹೆಚ್ಚಿರಬೇಕಿತ್ತು. ಅದರೆ ಸರ್ವೇಯೊಂದರ ಸಮೀಕ್ಷೆ ಪ್ರಕಾರ ಇದು ಕೇವಲ 0.6 ಪ್ರತಿಶತ ಇದೆ.

ಈ ಕಾನೂನನ್ನು ರದ್ದುಗೊಳಿಸದೇ ಇದ್ದಲ್ಲಿ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಇದನ್ನು ವಿರೋದಿಸಿ ಮುಂದಿನ ಹೋರಾಟವನ್ನು ನಡೆಸಲಾಗುವುದು ಎಂದರು.
ಸದೀಹಾ ಫಾರುಖ್, ಜರೀನಾ ಕೋಲಾ ಸೇರಿದಂತೆ ಇತರರು ಇದ್ದರು.