Home Local ಫೆ. 3 ರಂದು ಶ್ರೀ ಕರಿಕಾನಮ್ಮನ ಗುಡ್ಡದಲ್ಲಿ ನಡೆಯಲಿದೆ 20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ.

ಫೆ. 3 ರಂದು ಶ್ರೀ ಕರಿಕಾನಮ್ಮನ ಗುಡ್ಡದಲ್ಲಿ ನಡೆಯಲಿದೆ 20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ.

SHARE

ಹೊನ್ನಾವರ : ಕಲಾಮಂಡಳ ಹೊನ್ನಾವರ, ಎಸ್.ಕೆ.ಪಿ. ಮ್ಯೂಸಿಕ್ ಟ್ರಸ್ಟ್ ಅರೇಅಂಗಡಿ ಮತ್ತು ಎಸ್.ಕೆ.ಪಿ. ದೇವಸ್ಥಾನ ಟ್ರಸ್ಟ್ ನೀಲ್ಕೋಡು ಇವರ ಸಹಯೋಗದೊಂದಿಗೆ ವಿಂಶತಿ ಸಮಾರಂಭ 20ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತದ ಬೆಳವಣಿಗೆಗೆ ಸೇವೆ ಸಲ್ಲಿಸಿದ 40ಕ್ಕೂ ಹೆಚ್ಚು ಹಿರಿಯ ಸಂಗೀತ ಸಾಧಕರಿಗೆ ಸನ್ಮಾನ, “ನಾದಮಾಧವ ರಾಷ್ಟ್ರೀಯ ಪ್ರಶಸ್ತಿ” ಮತ್ತು “ಅವಿನಾಶ ಹೆಬ್ಬಾರ್ ಸಂಸ್ಮರಣ ಯುವ ಪುರಸ್ಕಾರ” ಪ್ರಧಾನ ಕಾರ್ಯಕ್ರಮ ಫೆ. 3 ರಂದು ಶನಿವಾರ ಸಂಜೆ 6 ಘಂಟೆಗೆ ನೀಲ್ಕೋಡ ಶ್ರೀ ಕರಿಕಾನಮ್ಮನ ಗುಡ್ಡದಲ್ಲಿ ನಡೆಯಲಿದೆ ಎಂದು ತಬಲಾ ವಿದ್ವಾನ್ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಎಂದು ಮಾಹಿತಿ ನೀಡಿದರು.

ಇವರು ಪಟ್ಟಣದ ಸಾಗರ ರೇಸಿಡೆನ್ಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ಪವಿತ್ರ ಪರಿಸರದಲ್ಲಿ ಒಂದೇ ವೇದಿಕೆಯಲ್ಲಿ ಜಿಲ್ಲೆಯ 40ಕ್ಕೂ ಹೆಚ್ಚು ಹಿರಿಯ ಸಂಗೀತ ಸಾಧಕರಿಗೆ ಸನ್ಮಾನ ಮಾಡುವ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಿಂಶತಿ ಸಮಾರಂಭ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಅನಂತಕುಮಾರ ಹೆಗಡೆ ಉದ್ಘಾಟಿಸುವರು, ಎಸ್.ಕೆ.ಪಿ. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಭಟ್ಟ ಕೆಶುಪಾಲು ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಸೆಲ್ಕೋ ಇಂಡಿಯಾ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕøತ, ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ ಪ್ರಶಸ್ತಿ ಪುರಸ್ಕøತ, ಸಂಸ್ಥಾಪಕ ಡಾ. ಎಚ್. ಹರೀಶ ಹಂದೆ ಇವರು ಪಾಲ್ಗೊಳ್ಳುವರು, ಸಾಮವೇದ ವಿದ್ವಾಂಸರು ಮತ್ತು ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನ ಅರ್ಚಕರಾದ ವೇ. ಸುಬ್ರಹ್ಮಣ್ಯ ಭಟ್ಟ ಉಪಸ್ಥಿತರಿರುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಮಂಡಲ ಅಧ್ಯಕ್ಷ ಡಾ. ಎಂ. ಜಿ. ಹೆಗಡೆ ವಹಿಸಲಿದ್ದಾರೆ. ಅವಿನಾಶ ಹೆಬ್ಬಾರ್ ಸಂಸ್ಮರಣ ಯುವ ಪುರಸ್ಕಾರವನ್ನು ಮಂಗಳೂರಿನ ಉಸ್ತಾದ್ ರಫಿಕ್ ಖಾನ್‍ರ ಶಿಷ್ಯ ಅಂಕುಶ್ ನಾಯಕ್ ಇವರಿಗೆ ನೀಡಿ ಗೌರವಿಸಲಾಗುವುದು. ಹಾಗೂ ನಾದಮಾಧವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಧಾರವಾಡದ ಖ್ಯಾತ ಸಿತಾರ್ ವಾದಕ ಪಂ. ಶಿವಾನಂದ ತರ್ಲಫಟ್ಟಿ ಇವರಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಡುವ ನಮ್ಮ ಜಿಲ್ಲೆಯ ಹಿರಿಯ ಸಂಗೀತ ಸಾಧಕರು : ಭಾರತಿ ಗೋಕರ್ಣ ಮುಂಡಗೋಡ, ಜಿ.ಜಿ.ಹೆಗಡೆ ಹಿತ್ಲಳ್ಳಿ, ಜಿ.ಕೆ.ಹೆಗಡೆ ಹರಿಕೇರಿ, ಜಿ.ಎಸ್. ಹೆಗಡೆ ಗುಣವಂತೆ, ಜಿ. ಟಿ. ಹೆಗಡೆ ಮಾಗೋಡ, ಗಣಪತಿ ಭಟ್ಟ ಹಾಸಣಗಿ, ಕೆ.ಸಿ. ಹೆಗಡೆ ಕಬ್ಬೆ, ಕೃಷ್ಣ ಅವಧಾನಿ ಕರ್ಕಿ, ಲಲಿತಾ ಪಿ. ಹೆಗಡೆ ಮಾನೀರು, ಎಂ.ಟಿ. ಭಾಗ್ವತ ಉಂಚಗೇರಿ, ಮೋಹನ ಹೆಗಡೆ ಹುಣಸೆಕೊಪ್ಪ, ಎನ್. ಎಸ್. ಹೆಗಡೆ ಕೆರೆಮನೆ, ನಾಗವೇಣಿ ಹೆಗಡೆ ಕೆರೆಮನೆ, ಪಾರ್ವತಿ ಭಟ್ಟ ಸೂರಿ ಕರ್ಕಿ, ಆರ್. ವಿ. ಹೆಗಡೆ ಹಳ್ಳದಕೈ, ಎಸ್. ಎಮ್. ಭಟ್ಟ ಕಟ್ಟಿಗೆ, ಶೈಲಜಾ ಮಂಗಳೂರಕರ್ ಶಿರಸಿ, ಶ್ರೀಕೃಷ್ಣ ರಾವ್ ಕಲ್ಗುಂಡಿಕೊಪ್ಪ, ಶ್ರೀಪತಿ ಹೆಗಡೆ ಕೂಜಳ್ಳಿ, ವತ್ಸಲಾ ಮಾಪಾರಿ ಶಿರಸಿ, ತಾರಾ ಜಿ. ಭಟ್ಟ ಬೋಳ್ಗೆರೆ, ವಿಠಲದಾಸ್ ಶೇಟ ಕಾಣೇಕರ್ ಶಿರಸಿ, ಸುಬ್ರಹ್ಮಣ್ಯ ಹೆಗಡೆ ಹರೀಶೆ, ಮಂಗಳೂರು, ಫಕೀರಪ್ಪಾ ಭಜಂತ್ರಿ ಮುಂಡಗೋಡು, ಭಾರತಿ ಮೇಸ್ತ ಹೊನ್ನಾವರ, ದಿನೇಶ ಗುಡ್ಕರ್ ಕಾರವಾರ, ಜಿ.ಕೆ. ಭಟ್ಟ ಮೂಡಭಟ್ಕಳ, ಜಿ.ಆರ್. ಹೆಗಡೆ ದೊಡ್ಮನೆ, ಜಿ.ಎಸ್. ಹೆಗಡೆ ನವಣಗೆರೆ, ಗಜಾನನ ಭಂಡಾರಿ ಇಡಗುಂಜಿ, ಗೀತಾ ಹೆಗಡೆ ಗುಣವಂತೆ, ಕಾಶಿಮಸಾಬ್ ಜಮಾದಾರ್ ದಾಂಡೇಲಿ, ಕೃಷ್ಣ ಭಂಡಾರಿ ಕುಮಟಾ, ಲತಾ ಉಡಗಣಿ ಯಲ್ಲಾಪುರ, ಎಮ್. ಪಿ. ಹೆಗಡೆ ಪಡಿಗೇರಿ, ಮಧುಕರ ನಾಗ್ವೇಕರ್ ಅಂಕೋಲಾ, ಎನ್. ಎಸ್. ಹೆಗಡೆ ಹಿರೇಮಕ್ಕಿ, ನಾರಾಯಣ ಎಸ್. ಭಂಡಾರಿ ಹೊಸಾಕುಳಿ, ಪರಮೇಶ್ವರ ಹೆಗಡೆ ಕಲ್ಭಾಗ, ಪ್ರಭಾಕರ ಎಸ್. ಭಟ್ಟ ಕೆರೆಕೈ, ರಾಮ ಹೆಗಡೆ ಕೆರೆಮನೆ, ಸಂಜೀವ ಪೋತದಾರ್ ಶಿರಸಿ, ಎಸ್.ಶಂಭು ಭಟ್ಟ ಕಡತೋಕಾ, ಶ್ರೀಪಾದ ಹೆಗಡೆ ಕಂಪ್ಲಿ.

ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವ ಕಲಾವಿದರು : ತಬಲಾ ವಾದಕರಾಗಿ ಎನ್. ಜಿ. ಹೆಗಡೆ ಕಪ್ಪೇಕೇರಿ, ಗುರುರಾಜ ಹೆಗಡೆ ಆಡುಕಳ, ಗಣಪತಿ ಹೆಗಡೆ ಹರಿಕೇರಿ, ಮಧು ಕುಡಾಲ್ಕರ್ ಅಂಕೋಲಾ, ಎನ್. ಜಿ. ಅನಂತ ಮೂರ್ತಿ ಗುಣವಂತೆ, ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಬಾಲಚಂದ್ರ ಹೆಬ್ಬಾರ್ ಕೋಣಾರ್, ಶಂಕರ ಹೆಗಡೆ ಹಿರೇಮಕ್ಕಿ, ಗಜಾನನ ಹೆಗಡೆ ಗಿಳಿಗುಂಡಿ, ಆರ್.ಟಿ ಹೆಬ್ಬಾರ್ ಕರ್ಕಿ, ಸಂವಾದಿನಿಯಲ್ಲಿ ಭರತ್ ಹೆಗಡೆ ಹೆಬ್ಬಲಸು, ಗೌರೀಶ ಯಾಜಿ ಕೂಜಳ್ಳಿ, ನರೇಂದ್ರ ನಾಯಕ್ ಮಂಗಳೂರು, ವಾಸುದೇವ ತಾಮಣಕರ್ ಕುಮಟಾ, ಪ್ರಕಾಶ ಹೆಗಡೆ ಯಡಳ್ಳಿ ಸಂಗೀತೋತ್ಸವದಲ್ಲಿ ಸಹಕರಿಸಲಿದ್ದಾರೆ.

“ನಾದಮಾಧವ ರಾಷ್ಟ್ರೀಯ ಪ್ರಶಸ್ತಿ”ಯ ಪ್ರಾಯೋಜಕರಾಗಿ ಪ್ರೊ. ಆರ್. ವಿ. ಹೆಗಡೆ ಹಳ್ಳದಕೈ ಹಾಗೂ “ಅವಿನಾಶ ಹೆಬ್ಬಾರ್ ಸಂಸ್ಮರಣ ಯುವ ಪುರಸ್ಕಾರ”ದ ಪ್ರಾಯೋಜಕರಾಗಿ ನರೇಂದ್ರನಾಥ ಉಡುಪ ಇವರು ಸಹಕರಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವರಾಮ ಭಟ್ ನೀಲ್ಕೋಡ, ಗಣಪತಿ ಹೆಗಡೆ ಹರಿಕೇರಿ ಉಪಸ್ಥಿತರಿದ್ದರು