Home Local ಕರಾವಳಿ ಡ್ರೀಮ್ ಬಾಯ್ಸ್ ಡಾನ್ಸ್ ಗ್ರೂಪ್ ಹೊಸ ಹಿತ್ತಲ ಮಂಕಿ ಇವರ ಆಶ್ರಯದಲ್ಲಿ ೯ನೇ ವರ್ಷದ...

ಕರಾವಳಿ ಡ್ರೀಮ್ ಬಾಯ್ಸ್ ಡಾನ್ಸ್ ಗ್ರೂಪ್ ಹೊಸ ಹಿತ್ತಲ ಮಂಕಿ ಇವರ ಆಶ್ರಯದಲ್ಲಿ ೯ನೇ ವರ್ಷದ ಪ್ರತಿಭಾ ಪುರಸ್ಕಾರ

SHARE

ಕರಾವಳಿ ಡ್ರೀಮ್ ಬಾಯ್ಸ್ ಡಾನ್ಸ್ ಗ್ರೂಪ್ ಹೊಸ ಹಿತ್ತಲ ಮಂಕಿ ಇವರ ಆಶ್ರಯದಲ್ಲಿ ೯ನೇ ವರ್ಷದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ, ಮತ್ತು ಮನರಂಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಮಾಂಕಾಳ ವೈದ್ಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಕರಾವಳಿ ಮುಂಜಾವು ಸಂಪಾದಕರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ TB ಹರಿಕಾಂತ ವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಲಾಯಿತು. ಜೊತೆಯಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಕ, ರಾಜು ನಾಯ್ಕ, ಸುರೇಶ್ ಹರಿಕಾಂತ್, ಈಶ್ವರ್ ಹರಿಕಾಂತ, ವೆಂಕಟ್ರಮಣ ಹರಿಕಾಂತ, ಗಣಪತಿ ಹರಿಕಾಂತ ಉಪಸ್ಥಿತರಿದ್ದರು.