Home Local ನಾಟಕಗಳು ಬದುಕಿನ ನೈಜತೆಯನ್ನು, ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುತ್ತದೆ. – ನಾಗರಾಜ ನಾಯಕ ತೊರ್ಕೆ

ನಾಟಕಗಳು ಬದುಕಿನ ನೈಜತೆಯನ್ನು, ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುತ್ತದೆ. – ನಾಗರಾಜ ನಾಯಕ ತೊರ್ಕೆ

SHARE

ಕುಮಟಾ- ಓಂಕಾರ ಕಲಾಸಿರಿ ನಾಟ್ಯಸಂಘ ಕಡ್ಲೆ, ಕುಮಟಾ ಇವರ ಆಶ್ರಯದಲ್ಲಿ ಕಡ್ಲೆ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ದೀಪಾಲಂಕೃತ ರಂಗ ಸಜ್ಜಿಕೆಯಲ್ಲಿ ಹುಚ್ಚನ ಕಣ್ಣೀರು ಅರ್ಥಾತ್ ರೊಚ್ಚಿಗೆದ್ದ ಹುಚ್ಚ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರಾದ ಸೂರಜ ನಾಯ್ಕ ಸೋನಿಯವರು ಉದ್ಘಾಟಿಸಿ ಮಾತನಾಡಿ ನಾಟಕಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಸಾಮಾಜಿಕ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಓಂಕಾರ ಕಲಾಸಿರಿ ನಾಟ್ಯ ಸಂಘದ ಕಾರ್ಯ ಅಭಿನಂದನೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಯವರು ಮಾತನಾಡಿ ಟಿವಿ, ಇಂಟರ್ನೆಟ್, ಫೇಸ್‍ಬುಕ್ ಇತ್ಯಾದಿ ಆಧುನಿಕ ತಂತ್ರಜ್ಞಾನದಿಂದಾಗಿ ನಾಟಕದಂತಹ ಅದ್ಭುತವಾದ ಕಲೆ ಮರೆಯಾಗುತ್ತಿದೆ. ನಾಟಕಗಳು ಬದುಕಿನ ನೈಜತೆಯನ್ನು, ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುತ್ತದೆ. ಕಲಾವಿದರು ಬೆಳೆದರೆ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ತೀರಾ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಟಕ ಪ್ರದರ್ಶನದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಯುವಪೀಳಿಗೆಯಲ್ಲಿ ನಾಟಕಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಮಹತ್ವಪೂರ್ಣವಾದದ್ದು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಸುಬ್ರಾಯ ವಾಳ್ಕೆ ಅವರು ಮಾತನಾಡಿ ನಾಟಕ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಿದಲ್ಲಿ ಜನರಲ್ಲಿ ನಾಟಕಗಳ ಬಗ್ಗೆ ಒಲವು ಮೂಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ. ಪಂ. ಸದಸ್ಯರಾದ ಪ್ರದೀಪನಾಯಕ ದೇವರಬಾವಿ ಅವರು ಮಾತನಾಡಿ ಯಾವುದೇ ಕಲೆ, ಕಲಾವಿದರು ಬೆಳೆಯಬೇಕಾದರೆ ಅದಕ್ಕೆ ಪ್ರೋತ್ಸಾಹ ತೀರಾ ಅಗತ್ಯವಾಗಿದೆ. ನಾಟಕವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಓಂಕಾರ ಕಲಾಸಿರಿ ನಾಟ್ಯ ಸಂಘದ ಕಾರ್ಯ ಮೆಚ್ಚುವಂತಾಗಿದೆ ಎಂದರು.

ಇದೇ ವೇದಿಕೆಯಲ್ಲಿ ಸಂಗೀತಗಾರರಾದ ರಾಮಚಂದ್ರ ಗಂಗೆಮನೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಊರ ಜನರು ಹಾಗೂ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.