Home Local ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ “ಕುಮಟಾ ಉತ್ಸವ”ಕ್ಕೆ ಅದ್ಧೂರಿ ಚಾಲನೆ.

ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ “ಕುಮಟಾ ಉತ್ಸವ”ಕ್ಕೆ ಅದ್ಧೂರಿ ಚಾಲನೆ.

SHARE

ಕುಮಟಾ :ಜನರಿಗೆ ಮನರಂಜನೆಯ ಸರಣಿದಿನಗಳೇ ಪ್ರಾರಂಭವಾಗಿದೆ.ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ ಎಂದೇ ಬಿಂಬಿತವಾಗಿರುವ ಕುಮಟಾ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ .

ಐದು ದಿನಗಳ ಕಾಲ ಜನರನ್ನು ರಂಜಿಸಲಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಯ ಕುಮಟಾ ಉತ್ಸವ ಮಣಕಿ ಮೈದಾನದಲ್ಲಿ ಅದ್ದೂರಿ ವೇದಿಕೆಯಲ್ಲಿ ಇಂದು  ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.

ಉತ್ತರಕನ್ನಡ ಉಸ್ತುವಾರಿ ಸಚಿವರಾದ ಆರ್ .ವಿ ದೇಶಪಾಂಡೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವನದಲ್ಲಿ ಮಾನಸಿಕ‌ ನೆಮ್ಮದಿ ನೀಡುವು ಸಮಯಗಳು. ಉತ್ತಮ ರೀತಿಯಲ್ಲಿ ಈ ಕುಮಟಾ ಉತ್ಸವ ಸಂಘಟನೆಗೊಂಡು ಜನರಿಗೆ ಮುದ ನೀಡುತ್ತಿರುವುದು ಸಂತಸದ ವಿಚಾರ. ಇಂತಹ ಸಂಘಟನೆಗಳ ಅಗತ್ಯತೆ ಇದೆ ಇಂತಹ ಕಾರ್ಯಕ್ರಮಗಳು ಹೆಚ್ಚಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಶೆಟ್ಟಿಯವರು ಇಂತಹ ವೈವಿದ್ಯಮಯ ಕಾರ್ಯಕ್ರಮ ರೂಪಿಸಿ ಜನತೆಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾದ ಎಲ್ಲರನ್ನೂ ಅಭಿನಂದಿಸಿದರು.

ಕಾರ್ಯಕ್ರಮದ ಸಂಯೋಜಕರು ಹಾಗೂ ಕುಮಟಾ ಉತ್ಸವ ಸಮಿತಿ ಅಧ್ಯಕ್ಷರಾದ ರವಿಕುಮಾರ ಶೆಟ್ಟಿಯವರು ವೇದಿಕೆಯಲ್ಲಿ‌ದ್ದು ಕಾರ್ಯಕ್ರಮದ ಉದ್ಧೇಶ ತಿಳಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಮುರಳೀಧರ ಪ್ರಭು, ಪುರಸಭೆಯ ಅಧ್ಯಕ್ಷರಾದ ಮಧುಸೂಧನ ಶೇಟ್,ಶ್ರೀಮತಿ ಜಯಶ್ರೀ ಮೊಗೇರ್,ಹೊನ್ನಪ್ಪ ನಾಯ್ಕ ಇನ್ನಿತರರು ಹಾಜರಿದ್ದರು.