Home Local ಕುಮಟಾ ಉತ್ಸವ : ನಗೆಗಡಲಲ್ಲಿ ತೇಲಿದ ನೆನಪಿನೊಂದಿಗೆ ಇಂದು ನಡೆಯಲಿದೆ ಅತ್ಯುತ್ತಮ ಕಾರ್ಯಕ್ರಮ.

ಕುಮಟಾ ಉತ್ಸವ : ನಗೆಗಡಲಲ್ಲಿ ತೇಲಿದ ನೆನಪಿನೊಂದಿಗೆ ಇಂದು ನಡೆಯಲಿದೆ ಅತ್ಯುತ್ತಮ ಕಾರ್ಯಕ್ರಮ.

SHARE

ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸಲಿರುವ ಕುಮಟಾ ಉತ್ಸವ ಶುಭಾರಂಭಗೊಂಡಿದ್ದು. ಕಾರ್ಯಕ್ರಮಗಳು ಜನರಿಗೆ ವಿಶೇಷ ರಸದೌತಣ ನೀಡುತ್ತಿದೆ.

ಮೊದಲ ದಿನವಾದ ನಿನ್ನೆ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ ಚಿತ್ರದುರ್ಗ ಇವರಿಂದ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮ ನಡೆಯಿತು .ಹೋಂ ಡ್ಯಾನ್ಸ್ ತಂಡ ಕೊಚ್ಚಿನ್ ಕೇರಳ ಇವರಿಂದ ಅದ್ಭುತ ನೃತ್ಯ ಪ್ರದರ್ಶನದ ಜೊತೆಗೆ ಮಿಸ್ಟರ್ ಪಾಪ ಪಾಂಡು ಮೂರು ಮುತ್ತು ಖ್ಯಾತಿಯ ಕುಳ್ಳಪ್ಪ ತಂಡದವರಿಂದ ನಡೆದ ಕಾರ್ಯಕ್ರಮ ಎಲ್ಲರನ್ನು ನಕ್ಕು ನಗಿಸಿತು .

ಇಂದು ಏನೇನು?

ಇಂದು ಸಂಜೆ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಅದರ ಜೊತೆಗೆ ಭೂ ಕೈಲಾಸ ಯಕ್ಷಗಾನ ಪ್ರದರ್ಶನ ಕೂಡ ನಡೆಯಲಿದೆ .ಸಂಗೀತಾ ರವೀಂದ್ರನ್, ದಾಮೋದರ ನಾಯ್ಕ್, ನಿಖಿಲ್ ಪಾರ್ಥಸಾರಥಿಯವರ ಕಾರ್ಯಕ್ರಮ, ಗಾಳಿಪಟ ಚಲನ ಚಿತ್ರದ ನಟಿ ಭಾವನಾ ಅವರಿಂದ ನೃತ್ಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ .ಬೆಂಗಳೂರಿನ ತಂಡದಿಂದ ಸಂಗೀತ ವೃಷ್ಟಿ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುವ ನಿರೀಕ್ಷೆ ಜನರಲ್ಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಕುಮಟಾ ಉತ್ಸವ ಸಮಿತಿಯ ಅಧ್ಯಕ್ಷರಾದ ರವಿ ಕುಮಾರ್ ಶೆಟ್ಟಿ ಎಲ್ಲರನ್ನು ಮತ್ತೊಮ್ಮೆ ಆಹ್ವಾನಿಸಿದ್ದಾರೆ.